ವಯಸ್ಸು ಮುಖ್ಯವಲ್ಲ, ಛಲ ಮುಖ್ಯ : 8 ವರ್ಷದ ಪರ್ವತಾರೋಹಿ ಪಾರಸ್
ಧರ್ಮಶಾಲಾ,ಜೂನ್ 2 : ತನ್ನ ಚಿಕ್ಕಿಪ್ಪನಿಂದ ಪರ್ವತಾರೋಹಣದ ಕುರಿತು ಕೇಳಿ ತಿಳಿದಿದ್ದ ಎಂಟು ವರ್ಷದ ಬಾಲಕ ಪಾರಸ್ ತನ್ನ ಚಿಕ್ಕಪ್ಪನೊಂದಿಗೆ ಮೂರು ಗಂಟೆಗಳಲ್ಲಿ 4425 ಮೀಟರ್ ಎತ್ತರದ ಬೆಟ್ಟ ಏರಿ ದಾಖಲೆ ನಿರ್ಮಿಸಿದ್ದಾನೆ. ಪಾರಸ್ ಬಹಳ ಚಿಕ್ಕಪ್ರಾಯದಲ್ಲಿ ಇಂದ್ರಹಾರ್ ಪರ್ವತ ಏರಿದ ಬಾಲಕ ಎಂದು ದಾಖಲೆಗಳ ಪುಟಕ್ಕೆ ಸೇರಿದ್ದಾನೆ. ಭವಿಷ್ಯದಲ್ಲಿ ಸೇನೆಗೆ ಸೇರಬೇಕೆಂಬುದು ಅವನ ಆಸೆ. ತನ್ನ ಚಿಕ್ಕಪ್ಪ ಪರ್ವತಾರೋಹಣ ಕ್ಷೇತ್ರದಲ್ಲಿದ್ದುದರಿಂದ ಆತ ಪ್ರಭಾವಿತನಾಗಿದ್ದ ಎಂದು ವರದಿಗಳು ತಿಳಿಸಿವೆ. ವಯಸ್ಸು ಮುಖ್ಯವಲ್ಲ, ಛಲ ಮುಖ್ಯ ಎನ್ನುವ ಈ ಬಾಲಕನಿಗೆ ಪರ್ವತಾರೋಹಣದ ಹುಚ್ಚು ಎಷ್ಟಿತ್ತೆಂದರೆ ಸಮಯಸಿಕ್ಕಾಗಲೆಲ್ಲ ತನ್ನಚಿಕ್ಕಪ್ಪನಿಂದ ಆ ಬಗ್ಗೆ ಕೇಳಿ ತಿಳಿದು ಕೊಳ್ಳುತ್ತಿದ್ದ. ಪಾರಸ್ ಕಪೂರ್ ತನ್ನ ಚಿಕ್ಕಪ್ಪನ ಜೊತೆಗೆ ಲಾಕಾ ಪಾಸ್‌ನಿಂದ ಇಂದ್ರಹಾರ ಪಾಸ್‌ವರೆಗೆ ಪರ್ವತಾರೋಹಣ ಮಾಡಿದ್ದು ಮೂರು ಗಂಟೆಯಲ್ಲಿ ಇದನ್ನು ತಲುಪಿದ್ದಾನೆ. ಪಾರಸ್‌ನ ಚಿಕ್ಕಪ್ಪ ಸಂಸಾರ್‌ಚಂದ್ ಕಪೂರ್ ಪರ್ವತಾರೋಹಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.