ಅಮುಲ್ ಹಾಲಿನ ಬೆಲೆ ಲೀಟರ್‌ಗೆ 2ರೂ ಏರಿಕೆ

Update: 2016-06-02 12:53 GMT

ವಡೋದರಾ,ಜೂ.2: ‘ಅಮುಲ್’ಬ್ರಾಂಡ್‌ನಡಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟವು ತನ್ನ ಎಲ್ಲ ಬಗೆಯ ಹಾಲಿನ ದರಗಳನ್ನು ಪ್ರತಿ ಲೀಟರ್‌ಗೆ ಎರಡು ರೂ.ಹೆಚ್ಚಿಸಿದೆ.
ನೂತನ ದರಗಳು ಮೊದಲು ದಿಲ್ಲಿಯಲ್ಲಿ ಶನಿವಾರದಿಂದ ಜಾರಿಯಾಗಲಿದ್ದು, ಗುಜರಾತ್‌ನಲ್ಲಿ ರವಿವಾರದಿಂದ ಈ ಏರಿಕೆ ಅನ್ವಯವಾಗಲಿದೆ. ಅಮುಲ್ ರಾಷ್ಟ್ರ ರಾಜಧಾನಿಯಲ್ಲಿ ಕೊನೆಯ ಬಾರಿಗೆ 24 ತಿಂಗಳ ಹಿಂದೆ ಹಾಲಿನ ದರಗಳನ್ನು ಹೆಚ್ಚಿಸಿತ್ತು. ಅದು ಗುಜರಾತ್‌ನಲ್ಲಿ ಹಾಲಿನ ದರಗಳನ್ನು ಕಳೆದ ವರ್ಷದ ಜೂನ್‌ನಲ್ಲಿ ಹೆಚ್ಚಿಸಿತ್ತು.
ಕೋಲ್ಕತಾ,ಉತ್ತರ ಪ್ರದೇಶ,ಮುಂಬೈ ಮತ್ತು ಇತರೆಡೆಗಳಲ್ಲಿ ಅಮುಲ್ ಹಾಲಿನ ದರಗಳು ಮುಂದಿನ 8-10 ದಿನಗಳಲ್ಲಿ ಪರಿಷ್ಕರಣೆಯಾಗಲಿವೆ ಎಂದು ಒಕ್ಕೂಟದ ಎಂಡಿ ಆರ್.ಎಸ್.ಸೋಧಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News