ಮಹಾರಾಷ್ಟ್ರದ ಸಚಿವ ಖಡ್ಸೆಯ ಹಗರಣಗಳ ವರದಿ ಕೇಳಿದ ಶಾ
ಮುಂಬೈ, ,ಜೂ.2: ಮಹಾರಾಷ್ಟ್ರ ಸರಕಾರದ ಹಿರಿಯ ಸಚಿವ ಏಕನಾಥ ಖಡ್ಸೆಯವರ ವಿರುದ್ಧದ ಕಾನೂನು ಬಾಹಿರ ಭೂವ್ಯವಹಾರ ಭೂಗತ ಪಾತಕಿ ದಾವೂದ್ ಇಬ್ರಾಹೀಂನ ಕರ ದಾಖಲೆಗಳಲ್ಲಿ ಅವರ ಸೆಲ್‌ಫೋನ್ ಸಂಖ್ಯೆ ಕಾಣಿಸಿಕೊಂಡಿರುವ ಅವಳಿ ಆರೋಪಗಳ ಕುರಿತು ವಿಸ್ತೃತ ವರದಿಯೊಂದನ್ನು ನೀಡುವಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪಕ್ಷದ ಮಹಾರಾಷ್ಟ್ರ ಘಟಕಕ್ಕೆ ಆದೇಶ ನೀಡಿದ್ದಾರೆ.
ಖಡ್ಸೆಯವರ ವಿಷಯವನ್ನು ಅತಿ ತುರ್ತಾಗಿ ಪರಿಶೀಲಿಸುವಂತೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸರಿಗೆ ಸೂಚಿಸಿದ್ದಾರೆಂದು ಹಿರಿಯ ಮೂಲವೊಂದು ಎನ್‌ಡಿಟಿವಿಗೆ ತಿಳಿಸಿದೆ.
ಮುಖ್ಯಮಂತ್ರಿ ಫಡ್ನವೀಸ್,ವಿಸ್ತೃತ ಚರ್ಚೆಗಾಗಿ ಸೋಮವಾರ ಫಡ್ನವೀಸರನ್ನು ಭೇಟಿಯಾಗಿದ್ದರು. ಅವರು ಸೋಮವಾರ ರಾಜೀನಾಮೆ ಕೊಡಬಹುದೆಂದು ನಿರೀಕ್ಷಿಸಲಾಗಿತ್ತಾದರೂ ಕೊಟ್ಟಿಲ್ಲ. ಕೇಂದ್ರೀಯ ಬಿಜೆಪಿ ಒತ್ತಡವನ್ನು ಹೆಚ್ಚಿಸುತ್ತಿದೆ. ಖಡ್ಸೆ ಅದಕ್ಕೆ ಬಗ್ಗಲೇ ಬೇಕಾಗಿದೆ. ಈಗ ಉಲ್ಲಂಘನೆಗೆ ಅಲ್ಲಿ ಜಾಗವೇ ಇಲ್ಲವೆಂದು ಅಜ್ಞಾತವಾಗುಳಿಯ ಬಯಸಿದ ಹಿರಿಯ ಬಿಜೆಪಿ ಮೂಲವೊಂದು ಹೇಳಿದೆ.
ಬಿಕ್ಕಟ್ಟಿನ ಪ್ರಮಾಣವನ್ನು ಸೂಚಿಸುವಂತೆ, ಖಡ್ಸೆ ನಿನ್ನೆ ಸಂಪುಟ ಸಭೆಯೊಂದಕ್ಕೆ ಗೈರಾಗಿದ್ದರು. ಸೋಮವಾರದಿಂದ ಅವರು ಅಧಿಕೃತ ಕೆಂಪು ಗೂಟದ ಕಾರಿನ ಬಳಕೆಯನ್ನೂ ನಿಲ್ಲಿಸಿದ್ದಾರೆ.
ಖಡ್ಸೆಯವರಿಗೆ ಕಳೆದ ವರ್ಷ ದಾವೂದ್ ಇಬ್ರಾಹೀಂ ದೂರವಾಣಿ ಕರೆ ಮಾಡಿದ್ದನೆಂದು ಮೊದಲು ಒಬ್ಬ ಹ್ಯಾಕರ್ ಹಾಗೂ ಬಳಿಕ ಆಮ್ ಆದ್ಮಿ ಪಕ್ಷ ಆರೋಪಿಸಿತ್ತು. ಆದರೆ, ಈ ಆರೋಪದಲ್ಲಿ ಹುರುಳಿಲ್ಲವೆನ್ನುವುದು ಪಕ್ಷದ ಅಭಿಪ್ರಾಯವಾಗಿದೆಯೆಂದು ಬಿಜೆಪಿ ಮೂಲಗಳು ಹೇಳುತ್ತಿವೆ.
ಆದರೆ, ಎಪ್ರಿಲ್‌ನಲ್ಲಿ ಸರಕಾರಿ ಸ್ವಾಮ್ಯದ ಜಮೀನೊಂದನ್ನು ಮಾರುಕಟ್ಟೆದರ ರೂ.23 ಕೋಟಿಯಿದ್ದರೂ ಖಡ್ಸೆಯವರ ಪತ್ನಿಗೆ ಹಾಗೂ ಅಳಿಯನಿಗೆ ಸುಮಾರು ರೂ.3 ಕೋಟಿಗೆ ಮಾರಿರುವುದು ಪಕ್ಷಕ್ಕೆ ದೊಡ್ಡ ಕಳವಳದ ವಿಷಯವಾಗಿದೆ.
ಜಮೀನು ಸರಕಾರದ್ದಾಗಿರಲಿಲ್ಲ.ಅದನ್ನು ತಾನು ಖಾಸಗಿ ವ್ಯಕ್ತಿಯಿಂದ ಕೊಂಡಿದ್ದೇನೆ. ಅದಕ್ಕೆ ತಾನು ಮಾರುಕಟ್ಟೆ ಬೆಲೆಯ ಸ್ಟಾಂಪ್ ಡ್ಯೂಟಿ ಪಾವತಿಸಿದ್ದೇನೆ. ಆದುದರಿಂದ ಅದು ವ್ಯವಹಾರವು ಸಕ್ರಮವೆಂದು ಸಾಬೀತುಪಡಿಸುತ್ತಿದೆಯೆಂದು ಪ್ರತಿಪಾದಿಸಿದ್ದಾರೆ.
ರಾಜ್ಯದ ಕಂದಾಯ ಸಚಿವರಿಗೆ ದಾವೂದ್ ಕರೆ ಮಾಡಿರುವ ಆರೋಪದ ಬಗ್ಗೆ ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳವು ತನಿಖೆ ನಡೆಸುತ್ತಿದೆ.ಖಡ್ಸೆಯವರು ಅಧಿಕಾರದಲ್ಲಿದ್ದಲ್ಲಿ ನ್ಯಾಯಸಮ್ಮತ ತನಿಖೆ ಅಸಾಧ್ಯವೆಂದು ವಿಪಕ್ಷಗಳು ಹೇಳುತ್ತಿವೆ.
ದಾವೂದ್‌ನೊಂದಿಗೆ ಸಂಪರ್ಕವಿರುವುದನ್ನು ಖಡ್ಸೆ ನಿರಾಕರಿಸಿದ್ದಾರೆ. ಆತನ ಕರೆ ದಾಖಲೆಯಲ್ಲಿ ಕಾಣಿಸಿಕೊಂಡಿರುವ ದೂರವಾಣಿ ಸಂಖ್ಯೆ ತನ್ನದಲ್ಲ. ಆ ಸಂಖ್ಯೆಯನ್ನು ತಾನು ಕಳೆದ ವರ್ಷ ಬಳಸಿಯೇ ಇಲ್ಲ. ಆ ಕರೆ ದಾಖಲೆಯನ್ನು ಸಾಪ್ಟ್‌ವೇರ್ ಮೂಲಕ ನಕಲಿಯಾಗಿ ಸೃಷ್ಟಿಸಿರಬಹುದೆಂದು ಖಡ್ಸೆ ಪ್ರತಿಪಾದಿಸಿದ್ದಾರೆ.
ಆದಾಗ್ಯೂ, ಭ್ರಷ್ಟಾಚಾರದ ಕುರಿತು ಶೂನ್ಯ ತನ್ನದೆಂಬ ಮಾತನ್ನು ಬಿಜೆಪಿ ಉಳಿಸಿಕೊಳ್ಳಬೇಕಿದೆ.