ಮೋದಿ ವಿಶ್ವದ 10 ಮಂದಿ ಅಗ್ರ ನಾಯಕರಲ್ಲೊಬ್ಬರು: ನಾಯ್ಡು
Update: 2016-06-03 22:30 IST
ಹೈದರಾಬಾದ್, ಜೂ.3: ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸಗಳ ಕುರಿತು ವಿಪಕ್ಷಗಳು ಕೆಟ್ಟದಾಗಿ ಟೀಕಿಸುತ್ತಿರುವುದನ್ನು ಆಕ್ಷೇಪಿಸಿರುವ ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು, ದೇಶದ ಅಭಿವೃದ್ಧಿಗಾಗಿ ಪ್ರಧಾನಿ ವಿದೇಶ ನೀತಿಗೆ ಒತ್ತು ನೀಡುತ್ತಿದ್ದಾರೆಂದು ಹೇಳಿದ್ದಾರೆ
ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತನ್ನ ದನಿಯನ್ನು ಕೇಳುವಂತೆ ಮಾಡಿದ ಮೋದಿ ವಿಶ್ವದ 10 ಮಂದಿ ಅಗ್ರ ನಾಯಕರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆಂದು ಅವರು ತಿಳಿಸಿದ್ದಾರೆ.
ಭಾರತವೀಗ ವಿಶ್ವಾದ್ಯಾಂತ ಗುರುತಿಸಲ್ಟಟ್ಟಿದ್ದು ಗೌರವಿಸಲ್ಪಡುತ್ತಿದೆ. ಒಂದರ ಬಳಿಕೊಂದು ದೇಶವು ನಮ್ಮ ಪ್ರಧಾನಿಗೆ ಕೆಂಪು ಹಾಸಿನ ಸ್ವಾಗತ ಕೋರುತ್ತಿದೆ. ಅವರೀಗ ವಿಶ್ವದ 10 ಮಂದಿ ಅಗ್ರ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅವರಿದನ್ನು ತನ್ನ ಕ್ರಮಗಳು ಹಾಗೂ ಸಾಧನೆಗಳ ಮೂಲಕ ಗಳಿಸಿದ್ದಾರೆ. ಅವರು ದೇಶವನ್ನು ಮುನ್ನಡೆಸುತ್ತಿರುವ ರೀತಿಯನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆಂದು ನಾಯ್ಡು ಹೇಳಿದ್ದಾರೆ.