ಮಹಾರಾಷ್ಟ್ರ ಬಿಜೆಪಿ ಸಚಿವ ಖಡ್ಸೆ ರಾಜೀನಾಮೆ
Update: 2016-06-04 11:59 IST
ಮುಂಬೈ, ಜೂ.4: ಉಗ್ರನ ವಿಚಾರದಲ್ಲಿ ವಿವಾದಕ್ಕೀಡಾಗಿದ್ದ ಮಹಾರಾಷ್ಟ್ರದ ಕಂದಾಯ ಸಚಿವ ಏಕನಾಥ್ ಖಡ್ಸೆ ರಾಜೀನಾಮೆ ನೀಡಿದ್ದಾರೆ.
ಮುಖ್ಯ ಮಂತ್ರಿ ಫಡ್ನವಿಸ್‌ಗೆ ಖಡ್ಸೆ ರಾಜೀನಾಮೆ ಸಲ್ಲಿಸಿದರು.
ಏಕನಾಥ್ ಅವರು ಭೂಗತ ಪಾತಕಿ ದಾವೂದು ಇಬ್ರಾಹೀಂ ಜೊತೆ ಸಂಪರ್ಕ ಹೊಂದಿದ್ದ ಆರೋಪ ಎದುರಿಸುತ್ತಿದ್ದರು.
ಏಕನಾಥ್ ದೂರವಾಣಿ ಕರೆ ಮಾಡಿದ್ದ ಲೀಸ್ಟ್‌ನಲ್ಲಿ ದಾವೂದು ಇಬ್ರಾಹೀಂ ಫೋನ್ ನಂಬರ‍್ ದಾಖಲಾಗಿತ್ತು. ಇದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಖಡ್ಸೆ ರಾಜೀನಾಮೆ ನೀಡಿದ್ದಾರೆ. ಭೂಹಗರಣದಲ್ಲೂ ಭಾಗಿಯಾದ ಆರೋಪ ಅವರ ಮೇಲೆ ಕೇಳಿ ಬಂದಿತ್ತು.