×
Ad

ಹಝಾರೆಗೆ ಕೊಲೆ ಬೆದರಿಕೆ ಹಾಕಿದ ವ್ಯಕ್ತಿಯ ಬಂಧನ

Update: 2016-06-04 16:18 IST

ಹೊಸದಿಲ್ಲಿ, ಜೂನ್ 4: ಗಾಂಧಿವಾದಿ ಅಣ್ಣಾಹಝಾರೆಗೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ವರದಿಯಾಗಿರುವ ಪ್ರಕಾರ ಅಹ್ಮದ್‌ನಗರ್ ಪೊಲೀಸರು ಅಣ್ಣಾಹಝಾರೆಗೆ ಬೆದರಿಕೆ ಹಾಕಿದ ಜ್ಞಾನೇಶ್ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಹೇಳುವ ಪ್ರಕಾರ ಈತ ಒಂದು ಹೋಟೆಲ್ ನಡೆಸುತ್ತಿದ್ದಾನೆ. ಈತ ಅಂಬಾದಾಸ್ ಹೆಸರಿನಲ್ಲಿ ಹಝಾರೆಗೆ ಬೆದರಿಕೆ ಪತ್ರ ಕಳುಹಿಸಿದ್ದಾನೆ, ಅಹ್ಮದ್‌ನಗರ್ ಪೊಲೀಸರು ಆರೋಪಿಯನ್ನು ಕಸ್ಟಡಿಗೆ ಪಡೆದು ಪ್ರಶ್ನಿಸುತ್ತಿದ್ದಾರೆ. ಆರೋಪಿ ಜ್ಞಾನೇಶನು ಸುಮಾರು ಒಂದು ವರ್ಷಗಳಿಂದ ಅಣ್ಣಾಹಝಾರೆಗೆ ಕೊಲೆ ಬೆದರಿಕೆ ಹಾಕುತ್ತಲೇ ಇದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆದರಿಕೆ ಹಾಕಲು ಅಂಬಾದಾಸ್ ಎಂಬ ಹೆಸರನ್ನು ಬಳಸುತ್ತಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News