ಕಿರುತೆರೆ ಕಲಾವಿದೆ ಸುಲಭಾ ದೇಶಪಾಂಡೆ ನಿಧನ
Update: 2016-06-05 12:49 IST
ಮುಂಬೈ,ಜೂ.5: ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ಕಲಾವಿದೆ ಸುಲಭಾ ದೇಶಪಾಂಡೆ (79) ಅವರು ರವಿವಾರ ನಿಧನರಾದರು
ಸುಲಭಾ ದೇಶಪಾಂಡೆ ಅವರು ಮರಾಠಿ ಮತ್ತು ಹಿಂದಿ ಚಿತ್ರರಂಗಕ್ಕೆ ಚಿರಪರಿಚಿತರಾಗಿದ್ದರು. ಹಿಂದಿಯ ಖ್ಯಾತ ಚಿತ್ರಗಳಾದ ಭೂಮಿಕಾ(1977), ಅರವಿಂದ್ ದೇಸಾಯಿ ಕಿ ಅಜೀಬ್ ದಾಸ್ತಾನ್(1978), ಗಮನ್ (1978) ಮತ್ತು ‘ಇಂಗೀಷ್ ವಿಂಗ್ಲಿಶ್’ ಚಿತ್ರದಲ್ಲಿ ಅಭಿನಯಿಸಿದ್ದರು. ಸುಲಭಾ, 1971 ರಲ್ಲಿ ‘ಆವಿಷ್ಕಾರ್’ ಎಂಬ ಹೆಸರಿನ ನಾಟಕ ತಂಡವನ್ನು ತಮ್ಮ ಪತಿ ಅರವಿಂದ್ ದೇಶಪಾಂಡೆ ಜತೆ ಪ್ರಾರಂಭಿಸಿದ್ದರು.