ಕೇರಳ: ಮದ್ಯ ಕುಡಿಸಿ ಆದಿವಾಸಿ ಯುವತಿ ಅತ್ಯಾಚಾರ ಪ್ರಕರಣದಲ್ಲಿ ನಾಲ್ವರ ಬಂಧನ
ನಿಲಂಬೂರ್, ಜೂನ್ 5: ಆದಿವಾಸಿ ಯುವತಿಯನ್ನು ಕಾರಲ್ಲಿ ಕರೆದೊಯ್ದು ಮದ್ಯಕುಡಿಸಿ ಅತ್ಯಾಚಾರವೆಸಗಿದ ಆರೋಪದಲ್ಲಿ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕರುಳಾಯಿಯ ಜೀಪ್ ಡ್ರೈವರ್ ಚಳ್ಳಿಪಾಡನ್ ಮುಹಮ್ಮದ್ ಎಂಬ ಚೆರಿ(43).
ಮಂಬಾಡ್‌ನ ಪೈಕಡಲ್ ಫಿರೋರ್ ಎಂಬ ಪುಟ್ಟು ಫಿರೋರ್(32),ಕೊನ್ನಕೋಡನ್ ಅಝ್ಗರಲಿ ಎಂಬ ನಾಣಿ(27),ಕಾರಿಕುನ್ನ್ ಜಂಶೀರ್(27) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಜೇರಿ ಸ್ಪೆಶಲ್ ಕೋರ್ಟಿಗೆ ಆರೋಪಿಗಳನ್ನು ಹಾಜರು ಪಡಿಸಲಾಗಿದ್ದು ಪೊಲೀಸ್ ರಿಮಾಂಡ್‌ಗೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಇನ್ನೂ ಮೂವರಿದ್ದು ಅವರನ್ನು ಇನ್ನಷ್ಟೇ ಬಂಧಿಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರಲ್ಲಿ ಇಬ್ಬರು ವಿದೇಶದಲ್ಲಿದ್ದರೆ ಇನ್ನೊಬ್ಬ ಭೂಗತನಾಗಿದ್ದಾನೆ. ಘಟನೆಗೆ ಕುರಿತು ಪೊಲೀಸರು ಹೀಗೆ ವಿವರಿಸಿದ್ದಾರೆ-ಎರಡು ವರ್ಷ ಮೊದಲು ಕರುಳಾಯಿ ಕಾಡುಪ್ರದೇಶದಲ್ಲಿ ವಾಸಿಸುವ ಚೋಳನಾಯಕ್ ಪಂಗಡಕ್ಕೆ ಸೇರಿದ ಇಪ್ಪತ್ತೆರಡು ವರ್ಷದ ಯುವತಿಯನ್ನು ಜೀಪ್ ಡ್ರೈವರ್ ಮುಹಮ್ಮದ್ ಎಂಬ ಚೆರಿ ಮದ್ಯ ನೀಡಿ ಕಾಡಿನಲ್ಲಿಯೇ ಹಲವು ಸಲ ಅತ್ಯಾಚಾರ ಎಸಗಿದ್ದಾನೆ.
ಇದರಲ್ಲಿ ಯುವತಿಗೆ ಒಂದು ಮಗು ಇದೆ.ಒಂದೂವರೆ ವಾರಗಳ ಹಿಂದೆ ಮಂಬಾಡ್‌ನ ಫಿರೋಝ್ ಬಾಡಿಗೆಗೆ ಪಡೆದಿದ್ದ ಕಾರಿನಲ್ಲಿ ಯುವತಿಯನ್ನು ಕರೆದುಕೊಂಡು ಹೋಗಿ ಮದ್ಯಪಾನ ಮಾಡಿಸಿ ತಾಳಿಪೊಯಿಲ್, ರಾಮಂಕುತ್ತ್ ಎಂಬಲ್ಲಿನ ಮನೆಗಳಲ್ಲಿ ಹಾಗೂ ನಿಲಂಬೂರಿನ ಲಾಡ್ಜ್‌ನಲ್ಲಿಯೂ ಅತ್ಯಾಚಾರವೆಸಗಿದ್ದಾರೆ. ಯುವತಿಯ ಜೊತೆ ಇದ್ದ ಯುವತಿಯ ಗಂಡನನ್ನೂ ಮಗುವನ್ನೂ ಆಹಾರ ತರಲು ಕಳುಹಿಸಿ ಲಾಡ್ಜ್‌ನಲ್ಲಿ ಅತ್ಯಾಚಾರವೆಸಗಿ ನಂತರ ಮಂಬಾಡ್‌ನ ಗೆಳೆಯರಾದ ಅಝ್ಗರಲಿ ಹಾಗೂ ಜಂಶೀರ್ ಎಂಬವರನ್ನು ಲಾಡ್ಜ್‌ಗೆ ಕರೆಯಿಸಿಕೊಂಡು ಅವರೂ ಅತ್ಯಾಚಾರವೆಸಗಿದ್ದರು.
ಗಲ್ಫ್‌ನ ಗೆಳೆಯನೊಬ್ಬನ ಮೂಲಕ ಫಿರೋಝ್ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಗಲ್ಫ್‌ನಿಂದ ಊರಿಗೆ ಬಂದ ಫಿರೋಝ್ ಯುವತಿಯೊಂದಿಗೆ ಫೋನ್‌ನಲ್ಲಿ ಸಂಪರ್ಕ ಬೆಳೆಸಿದ್ದ. ಬಟ್ಟೆ, ಸುಗಂಧದ್ರವ್ಯಗಳನ್ನು ನೀಡುವೆ ಎಂದು ಕುಟುಂಬದ ಮನೆಯಲ್ಲಿದ್ದ ಯುವತಿಯನ್ನು ಫಿರೋಝ್ ಕಾರಿನಲ್ಲಿ ಕರೆದುಕೊಂಡು ಬಂದಿದ್ದ. ಈ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡ ಪ್ರಕರಣದಲ್ಲಿ ಇನ್ನಷ್ಟು ಮಂದಿ ಇದ್ದಾರೆ ಎಂದು ಪೊಲೀಸರು ಹೇಳಿದ್ದಾರೆ, ಅಝ್ಗರಲಿ ಎಂಬಾತ ಜಿಲ್ಲೆಯಲ್ಲಿ ನಾಲ್ಕು ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.
ಜಿಲ್ಲಾ ಪೊಲೀಸ್ ವರಿಷ್ಠರಾದ ಕೆ.ವಿಜಯನ್‌ರ ನಿರ್ದೇಶನದಲ್ಲಿ ಪೆರಿಂದಲ್‌ಮಣ್ಣ ಡಿವೈಎಸ್ಪಿ ಪಿ,ಎ.ವರ್ಗೀಸ್ ಆರೋಪಿಗಳನ್ನು ಬಂಧಿಸಿದ್ದಾರೆ. ನಿಲಂಬೂರ್ ಸಿಐಟಿ ಸಜೀವನ್, ಪಾಂಡಿಕ್ಕಾಟ್ ಸಿಐ ದೇವಸ್ಯ, ಪೂಕೊಟ್ಟುಂಪಾಡಂ ಎಸ್ಸೈ ಅಮೃತ್ರಾಂಗನ್ ತನಿಖಾ ತಂಡದಲ್ಲಿದ್ದರು.