ಅಮಿತ್ ಶಾರಿಗೆ ಅಡುಗೆ ಮಾಡಿದ ಅಡುಗೆಯವನನ್ನು ಕರೆತನ್ನಿ: ತನ್ನ ಕಾರ್ಯಕರ್ತರಿಗೆ ಆದೇಶಿಸಿದ ಮಾಯವತಿ!
Update: 2016-06-05 14:24 IST
ಲಕ್ನೊ, ಜೂನ್ 5: ಅಮಿತ್ ಶಾರಿಗಾಗಿ ಭೋಜನ ತಯಾರಿಸಿದ ಅಡಿಗೆಯವನನ್ನು ಹುಡುಕಿ ತರುವಂತೆ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ತನ್ನ ಕಾರ್ಯಕರ್ತರಿಗೆ ಆದೇಶಿಸಿದ್ದಾರೆ. ಶಾರಿಗೆ ಅಡಿಗೆ ಮಾಡಿದವನು ದಲಿತನೇ ಎಂದು ಮಾಯವತಿ ಶಂಕೆ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಅವನು ದಲಿತ ಅಲ್ಲ ಎಂದು ಮಾಯವತಿ ಅಭಿಪ್ರಾಯ ಪಟ್ಟಿದ್ದಾರೆ. ಪಕ್ಷದ ಸ್ಥಳೀಯ ಸಂಯೋಜಕ ಡಾ.ರಾಮ್‌ಕುಮಾರ್ ಕುರೀಲ್ ಮಾಯಾವತಿಯವರ ಸಂದೇಹಕ್ಕೆ ಪುಷ್ಟಿ ನೀಡಿದ್ದಾರೆ. ಇನ್ನೂರೈವತ್ತು ಮಂದಿ ಬಂದಿದ್ದರು ಆದರೆ ದಲಿತರೊಂದಿಗೆ ಕೇವಲ ಐವತ್ತು ಮಂದಿ ಮಾತ್ರ ಊಟ ಮಾಡಿದರು ಎಂದು ಕುರೀಲ್ ಹೇಳಿದ್ದಾರೆ. ದಲಿತರೊಂದಿಗೆ ಊಟ ಮಾಡಿ ಅದರ ರಾಜಕೀಯ ಲಾಭವನ್ನು ಪಡೆಯಲು ಪ್ರಯತ್ನಿಸುವ ನೀವು ತಪ್ಪು ಮಾಡುತ್ತಿದ್ದೀರಿ ಎಂದು ಅಮಿತ್‌ಶಾರನ್ನು ಅವರು ಎಚ್ಚರಿಸಿದ್ದಾರೆ.