ಜೂ.9ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ ಸಾಧ್ಯತೆ: ಹವಾಮಾನ ಇಲಾಖೆ

Update: 2016-06-07 13:56 GMT

ಚೆನ್ನೈ, ಜೂ.7: ಅನುಕೂಲಕರ ಪರಿಸ್ಥಿತಿಯ ಕಾರಣ ನೈಋತ್ಯ ಮಾರುತವು ಜೂ.9ರಂದು ಕೇರಳವನ್ನು ಪ್ರವೇಶಿಸುವ ಱಭಾರೀ ನಿರೀಕ್ಷೆಯಿದೆೞಯೆಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಹೇಳಿದೆ.
ಸಮಭಾಜಕ ವೃತತಿದಿಂದ ಕೆಳಗೆ ಗಾಳಿಯ ಬೀಸುವಿಕೆ ಬಲಗೊಂಡಿದೆ. ಅರೆಬಿ ಸಮುದ್ರದ ಮೇಲೆ ಪಶ್ಚಿಮದ ಗಾಳಿಯ ತೀವ್ರತೆ ಹೆಚ್ಚಾಗಿದೆ. ಕರ್ನಾಟಕ-ಕೇರಳ ಕರಾವಳಿಯ ಗುಂಟ ಸಮುದ್ರದಲ್ಲಿ ಅದು ದಟ್ಟೈಸಿದೆ. ಈ ಹಿನ್ನೆಲೆಯಲ್ಲಿ ಜೂ.9ರಂದು ಕೇರಳಕ್ಕೆ ಮುಂಗಾರು ಕಾಲಿಡುವ ಲಕ್ಷಣವಿದೆಯೆಂದು ಅದು ತನ್ನ ಮಧ್ಯಾಹ್ನದ ವಾರ್ತೆಯಲ್ಲಿ ತಿಳಿಸಿದೆ.
ಇದೇ ವೇಳೆ, ಮಂಗಳವಾರ ಮುಂಜಾನೆ 8:30ಕ್ಕೆ ಅಂತ್ಯಗೊಂಡ ಕಳೆದ 24 ತಾಸುಗಳಲ್ಲಿ ತಮಿಳುನಾಡಿನ ಅನೇಕ ಭಾಗಗಳಲ್ಲಿ ಮಳೆ ಬಂದಿದೆಯೆಂದು ಪ್ರಾದೇಶಿಕ ಹವಾಮಾನ ಇಲಾಖೆ ಹೇಳಿದೆ.
ರಾಜ್ಯದ ವಿವಿಧೆಡೆ ಗುಡುಗು-ಮಿಂಚುಗಳಿಂದ ಕೂಡಿದ ಮಳೆಯಾಗಿದೆ. ಸಂಬರಂಬಕ್ಕಂನಲ್ಲಿ ಗರಿಷ್ಠ 5ಸೆ.ಮೀ. ಹಾಗೂ ಚೆನ್ನೈಯಲ್ಲಿ 4ಸೆ.ಮೀ. ಮಳೆ ದಾಖಲಾಗಿದೆಯೆಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News