ಆಂಧ್ರ ವಿಧಾನಸಭೆಯನ್ನು ಅಣುಸ್ಥಾವರ ಎಂದು ತಲೆ ಕೆಡಿಸಿಕೊಂಡ ಪಾಕ್ ಮಾಧ್ಯಮಗಳು!

Update: 2016-06-08 03:24 GMT

ಹೈದರಾಬಾದ್, ಜೂ.8: ಆಂಧ್ರಪ್ರದೇಶ ಸರಕಾರ ತನ್ನ ಹೊಸ ರಾಜಧಾನಿಗೆ ಬೌದ್ಧಗ್ರಾಮವಾದ ಅಮರಾವತಿಯ ಹೆಸರಿಟ್ಟು, ಪೌರಾತ್ಯ ದೇಶಗಳನ್ನು ಆಕರ್ಷಿಸುವ ತಂತ್ರಕ್ಕೆ ಮುಂದಾಗಿದ್ದರೆ, ಇದು ಪಾಕಿಸ್ತಾನದ ಮಾಧ್ಯಮಗಳು ಅನಗತ್ಯವಾಗಿ ತಲೆಕೆಡಿಸಿಕೊಳ್ಳುವಂತೆ ಮಾಡಿದೆ.

ಅಂತಾರಾಷ್ಟ್ರೀಯ ವಾಸ್ತುಶಿಲ್ಪಸಂಸ್ಥೆಯಾದ ಮಾಕಿ ಅಂಡ್ ಅಸೋಸಿಯೇಟ್ಸ್ ವಿಧಾನಸಭೆಯ ಕಟ್ಟಡಕ್ಕೆ ಗೋಲಾಕಾರದ ವಿನ್ಯಾಸ ನೀಡಿರುವುದನ್ನು ಬಹಿರಂಗಪಡಿಸಿರುವುದರಿಂದ, ಇದನ್ನು ನೋಡಿದ ಪಾಕ್ ಮಾಧ್ಯಮಗಳು, ಕೃಷ್ಣಾ ಬಲದಂಡೆಯ ವಿಜಯವಾಡ ಬಳಿ ಬೃಹತ್ ಅಣುಸ್ಥಾವರ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ ಎಂಬ ಗುಲ್ಲೆಬ್ಬಿಸಿವೆ.

ಪಾಕಿಸ್ತಾನದ ಖಾಸಗಿ ವಾಹಿನಿಯೊಂದು ಈ ಬಗ್ಗೆ ಏರ್ಪಡಿಸಿದ್ದ ಚರ್ಚೆಯ ವಿಡಿಯೊ ತುಣುಕುಗಳನ್ನೊಳಗೊಂಡ ಕಾರ್ಯಕ್ರಮವನ್ನು ತೆಲುಗು ಚಾನಲ್ ಬಿತ್ತರಿಸಿದೆ. ಆಂಧ್ರದಲ್ಲಿ ಹೊಸ ಬೃಹತ್ ನಗರವನ್ನು ನಿರ್ಮಿಸಲು ಉದ್ದೇಶಿಸಿದ್ದು, ಇದು ಹೈಡ್ರೋಜನ್ ಬಾಂಬ್ ತಯಾರಿಸಲು ಮೂಲಸೌಕರ್ಯ ಸೃಷ್ಟಿಸುವ ಪ್ರಯತ್ನ ಎಂದು ಆಪಾದಿಸಿದೆ. ಅಮರಾವತಿ ಅಭಿವೃದ್ಧಿಪಡಿಸಲು ಅಮೆರಿಕ ನೆರವು ನೀಡುತ್ತಿದೆ ಎಂದೂ ಈ ಚಾನಲ್ ದೂರಿದೆ.

ಅಮರಾವತಿಗೆ ಚೀನಾ, ಜಪಾನ್ ಹಾಗೂ ಸಿಂಗಾಪುರ ಭೇಟಿ ನೀಡುತ್ತಿರುವುದು ಪಾಕ್ ಮಾಧ್ಯಮಗಳ ನಿದ್ದೆಗೆಡಿಸಿದೆ. ಆದರೆ ಅಣುಸ್ಥಾವರವನ್ನು ಹೋಲುವ ಗುಮ್ಮಟಾಕಾರದ ವಿನ್ಯಾಸವನ್ನು ಆಂಧ್ರ ವಿಧಾನಸಭೆ ತಿರಸ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News