×
Ad

ಕೇರಳದ ಗುತ್ತಿಗೆದಾರನಿಗೆ ಹಣಬಾಕಿ ಸೋನಿಯಾ ವಿರುದ್ಧ ಎಫ್‌ಐಆರ್ ದಾಖಲು

Update: 2016-06-08 19:51 IST

ತಿರುವನಂತಪುರ, ಜೂ.8: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ವಿರುದ್ಧ ನಗರದ ನಿರ್ಮಾಣ ಸಂಸ್ಥೆಯೊಂದು ಎಫ್‌ಐಆರ್ ಒಂದನ್ನು ದಾಖಲಿಸಿದೆ. ರಾಜೀವ್ ಗಾಂಧಿ ಇನ್‌ಸ್ಟಿಟ್ಯೂಟ್ ಫಾರ್ ಡೆವಲಪ್‌ಮೆಂಟ್ ಸ್ಟಡೀಸ್ ಸಂಸ್ಥೆಯ ನಿರ್ಮಾಣ ಕಾಮಗಾರಿಯ ಹಣವನ್ನು ಪಕ್ಷವು ಚುಕ್ತಾ ಮಾಡಿಲ್ಲವೆಂದು ಅದು ಆರೋಪಿಸಿದೆ.

ಎಫ್‌ಐಆರ್‌ನಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಮಾಜಿ ಗೃಹ ಸಚಿವ ರಮೇಶ್ ಚೆನ್ನಿತ್ತಲ ಹಾಗೂ ಕೇರಳ ಕಾಂಗ್ರೆಸ್ ಅಧ್ಯಕ್ಷ ವಿ.ಎನ್.ಸುಧೀರನ್‌ರನ್ನು ಇತರ ಆರೋಪಗಳಾಗಿ ಹೆಸರಿಸಿರುವುದು ಪಕ್ಷದ ರಾಜ್ಯ ಘಟಕಕ್ಕೆ ಬಹು ದೊಡ್ಡ ಹೊಡೆತವಾಗಿದೆ.

ಸುಮಾರು 7 ವರ್ಷದಿಂದ ಹಣ ಪಾವತಿ ಬಾಕಿಯಿದೆ. 2005ರಲ್ಲಿ ಕಾಂಗ್ರೆಸ್ ಅಧಕ್ಷೆ ಸೋನಿಯಾ ಗಾಂಧಿ ಸಂಸ್ಥೆಯನ್ನು ಉದ್ಘಾಟಿಸಿದರು. ಆದರೆ, ಇತ್ತೀಚಿನ ಚುನಾವಣಾ ಸೋಲಿನ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಘಟಕದಲ್ಲಿ ಬಿರುಕು ಮೂಡಿರುವ ಸುಳಿವು ಲಭಿಸಿರುವುದರಿಂದ ಈಗ ಎಫ್‌ಐಆರ್ ದಾಖಲಿಸಲಾಗಿದೆಯೆಂದು ಹೀದರ್ ಕನ್‌ಸ್ಟ್ರಕ್ಷನ್ ಕಂಪೆನಿ ತಿಳಿಸಿದೆ.

 ಶಿಕ್ಷಣ ಸಂಸ್ಥೆಯ ಉಸ್ತುವಾರಿಯನ್ನು ಈಗ ಚೆನ್ನಿತ್ತಲ ನೋಡಿಕೊಳ್ಳುತ್ತಿದ್ದಾರೆ. ಯೋಜನೆಯ ಆರಂಭದ ವೇಳೆ ಅವರು ರಾಜ್ಯ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು. ಆದಾಗ್ಯೂ, ರಾಜ್ಯ ಕಾಂಗ್ರೆಸ್‌ನ ಈಗಿನ ಅಧ್ಯಕ್ಷ ಸುಧೀರ್‌ನ, ಹಳೆಯ ಹಾಗೂ ಬಹಳ ಹಿಂದೆಯೇ ಮುಗಿದುರುವ ಯೋಜನೆಗೆ ಹಣ ನೀಡಲು ತನ್ನಿಂದ ಸಾಧ್ಯವಿಲ್ಲವೆಂದು ಹೇಳಿ, ಈ ವಿಚಾರದಲ್ಲಿ ತನ್ನ ಕೈಗಳನ್ನು ತೊಳೆದುಕೊಂಡಿದ್ದಾರೆಂದು ವರದಿಯಾಗಿದೆ.

ಯೋಜನೆ ಮುಗಿದು ಹಲವಾರು ವರ್ಷಗಳೇ ಸಂದರೂ, ಆ ಸಂಸ್ಥೆಯನ್ನು ಸ್ಥಾಪಿಸಿದ ಔಚಿತ್ಯವಾದರೂ ಏನೆಂದು ಕೆಲವು ಕಾಂಗ್ರೆಸ್ ನಾಯಕರೇ ಪ್ರಶ್ನಿಸುತ್ತಿದ್ದಾರೆಂದು ಕಂಪೆನಿಯ ಒಳಗಿನವರೊಬ್ಬರು ತಿಳಿಸಿದ್ದಾರೆ.

ಕೆಲವು ಸಮಯದಿಂದ ಈ ವಿವಾದ ಕುದಿಯುತ್ತಿದೆ. ಹಣವನ್ನು ಪಾವತಿಸುವಂತೆ ಸೋನಿಯಾ, ಕೇಳ ಕಾಂಗ್ರೆಸ್‌ಗೆ ಆದೇಶ ನೀಡಿದ್ದರೂ ಅದು ಪಾವತಿಸಿಲ್ಲವೆಂದು ಪಕ್ಷದ ಮೂಲಗಳು ಹೇಳುತ್ತಿವೆ.

  ಆದಾಗ್ಯೂ, ಕಾಮಗಾರಿಯ ಹಣ ಯಾವುದೇ ಬಾಕಿಯಿಲ್ಲ. ರೂ.20 ಕೋಳಿಯ ಯೋಜನೆಯಲ್ಲಿ ರೂ.2 ಕೋಟಿಯ ಸಣ್ಣ ಬಾಕಿ ಮಾತ್ರ ಉಳಿದಿದೆ. ತಾವು ವಿವಾದವನ್ನು ಪರಾಮರ್ಶಿಸಿದ್ದೇವೆ. 24 ತಾಸುಗಳಲ್ಲಿ ಎರಡೂ ಪಕ್ಷದವರು ಕುಳಿತು ವಿವಾದವನ್ನು ಬೆ ಹರಿಸಲಿದ್ದೇವೆಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News