ಮೋದಿಯನ್ನು ವಿವೇಕಾನಂದರಿಗೆ ಹೋಲಿಸಿದ ರಮಣ್ ಸಿಂಗ್!
Update: 2016-06-09 15:33 IST
ಹೊಸದಿಲ್ಲಿ, ಜೂನ್9: ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಕಾಂಗ್ರೆಸ್‌ನಲ್ಲಿ ನೀಡಿದ ಭಾಷಣವನ್ನು ಹೊಗಳುತ್ತಾ ಛತ್ತೀಸ್‌ಗಡದ ಮುಖ್ಯಮಂತ್ರಿ ರಮಣ್ ಸಿಂಗ್ ಮೋದಿಯನ್ನು ಸ್ವಾಮಿ ವಿವೇಕಾನಂದರಿಗೆ ಹೋಲಿಸಿದ್ದಾರೆ. ಸ್ವಾಮಿ ವಿವೇಕಾನಂದರು 1893ರಲ್ಲಿ ವಿಶ್ವ ಧರ್ಮಸಂಸತ್‌ನಲ್ಲಿ ಮಾಡಿದ್ದ ಭಾಷಣವನ್ನು ಮೋದಿಯ ರಾಜಕೀಯ ಭಾಷಣಕ್ಕೆ ಹೋಲಿಸಿ ಅವರು ಭಾವುಕರಾಗಿದ್ದಾರೆ.
ರಮಣ್ ಸಿಂಗ್ ಟ್ವೀಟ್ ಮಾಡಿ " ಪ್ರಧಾನಿ ನರೇಂದ್ರ ಮೋದಿಯವರು ಭಾಷಣದ ಮೂಲಕ ಯುಎಸ್ ಕಾಂಗ್ರೆಸ್‌ನ್ನು ಚಕಿತಗೊಳಿಸಿದ್ದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಅವರ ಭಾಷಣ ನನಗೆ ಒಂದು ಶತಮಾನದ ಹಿಂದೆ ಚಿಕಾಗೊದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ್ದ ಭಾಷಣವನ್ನು ನೆನಪಿಸಿತು" ಎಂದು ಬರೆದಿದ್ದಾರೆ.