ಮಾಜಿ ಸ್ಪೀಕರ್ ಟಿ.ಎಸ್. ಜೋನ್ ನಿಧನ
Update: 2016-06-09 15:51 IST
ಚೇರ್ತಲ, ಜೂನ್ 9: ಕೇರಳದ ಮಾಜಿ ಸಚಿವರು ಹಾಗೂ ವಿಧಾನಸಭೆಯ ಮಾಜಿ ಸ್ಪೀಕರ್ ಆಗಿದ್ದ ಟಿಎಸ್ ಜೋನ್ (74) ನಿಧನರಾದರು. ಕೇರಳ ಕಾಂಗ್ರೆಸ್ ಎಸ್ ಅಧ್ಯಕ್ಷರಾಗಿದ್ದ ಅವರು ಇಂದು ಬೆಳಗ್ಗೆ 7:30ಕ್ಕೆ ಚೇರ್ತಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕ್ಯಾನ್ಸರ್ ರೋಗಕ್ಕೆ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ಕೇರಳ ಕಾಂಗ್ರೆಸ್ ರೂಪೀಕರಿಸಿದಂದಿನಿಂದ ಪಕ್ಷದ ನಾಯಕತ್ವ ವಹಿಸಿಕೊಂಡಿದ್ದರು. ನಾಲ್ಕುಬಾರಿ (1970,82, 77, 96) ಕಲ್ಲುಪ್ಪಾರ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಚುನಾಯಿತರಾಗಿದ್ದರು. 1976-77 ಅವಧಿಯಲ್ಲಿ ಅವರು ಸ್ಪೀಕರ್ ಆಗಿದ್ದರು. 1978ರಲ್ಲಿ ಎ.ಕೆ. ಆ್ಯಂಟನಿ ಸಚಿವ ಸಂಪುಟದಲ್ಲಿ ಹಾಗೂ ನಂತರ ಪಿ.ಕೆ ವಾಸುದೇವನ್ ನಾಯರ್ ಸಚಿವಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದರು.
1976ರಲ್ಲಿ ಕೇರಳ ಕಾಂಗ್ರೆಸ್ ವಿಭಜನೆಯಾದ ಬಳಿಕ ಪಿಜೆ ಜೋಸೆಫ್‌ರ ಜೊತೆ ಇದ್ದ ಅವರು ನಂತರ ಪಿಸಿ ಜಾರ್ಜ್‌ನಜೊತೆ ಸೇರಿ ಕೇರಳ ಕಾಂಗ್ರೆಸ್ ಸೆಕ್ಯುಲರ್ ರಚಿಸಿದರು.