ಮಲೇಶ್ಯ: ದೇವಸ್ಥಾನದಲ್ಲಿ ದುಷ್ಕರ್ಮಿಗಳ ದಾಂಧಲೆ
Update: 2016-06-10 22:55 IST
ಕೌಲಾಲಂಪುರ, ಜೂ. 10: ಮಲೇಶ್ಯದ ಪೆನಂಗ್ ರಾಜ್ಯದಲ್ಲಿ ಶುಕ್ರವಾರ ಹಿಂದೂ ದೇವಸ್ಥಾನವೊಂದರಲ್ಲಿ ದುಷ್ಕರ್ಮಿಗಳು ದಾಂಧಲೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದೇ ಪ್ರದೇಶದಲ್ಲಿ ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಇಂಥದೇ ಇನ್ನೊಂದು ಘಟನೆ ನಡೆದಿರುವುದನ್ನು ಸ್ಮರಿಸಬಹುದಾಗಿದೆ.
ದುಷ್ಕರ್ಮಿಗಳು ಶ್ರೀ ಧರ್ಮ ಮುನಿಸ್ವೆರಾರ್ ದೇವಸ್ಥಾನದಲ್ಲಿ ದಾಂಧಲೆಗೈದಿದ್ದಾರೆ. ಹಾನಿಯ ಪ್ರಮಾಣವನ್ನು ಇನ್ನಷ್ಟೇ ಅಂದಾಜಿಸಬೇಕಾಗಿದೆ ಎಮದು ಉಪ ಮುಖ್ಯಮಂತ್ರಿ ಡಾ. ಪಿ. ರಾಮಸಾಮಿ ಹೇಳಿದರು.