ಏಳು ವರ್ಷಗಳ ಬಳಿಕ ಗೋವಾ ಸಚಿವನ ವಿರುದ್ಧ ಆರೋಪಪಟ್ಟಿ
Update: 2016-06-10 22:57 IST
ಪಣಜಿ,ಜೂ.10: ಶಾಸಕರಾಗಿದ್ದ ಸಂದರ್ಭ ಕೋಟಿಗಾವ್ ವನ್ಯಜೀವಿ ಧಾಮದ ಹಿರಿಯ ಅರಣ್ಯಾಧಿಕಾರಿಗಳ ಕಚೇರಿಗೆ ನುಗ್ಗಿ ವನ್ಯಜೀವಿ ಪ್ರದೇಶದಲ್ಲಿ ಅಕ್ರಮ ಪ್ರವೇಶದ ಆರೋಪದಲ್ಲಿ ಅಲ್ಲಿ ಇಲಾಖೆಯ ವಶದಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಬಲಾತ್ಕಾರದಿಂದ ಕರೆದೊಯ್ದಿದ್ದ ಗೋವಾದ ಕ್ರೀಡಾ ಸಚಿವ ರಮೇಶ ತಾವಡಕರ್ ವಿರುದ್ಧ ಸ್ಥಳೀಯ ಪೊಲೀಸರು ಬರೋಬ್ಬರಿ ಏಳು ವರ್ಷಗಳ ಬಳಿಕ ಶುಕ್ರವಾರ ಕಾಣಕೋಣ ನ್ಯಾಯಾಲಯದಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಿದರು. ಪ್ರಕರಣದಲ್ಲಿ ಬಿಜೆಪಿ ನಾಯಕ ತಾವಡಕರ್ ಸೇರಿದಂತೆ ಎಂಟು ಜನರನ್ನು ಆರೋಪಿಗಳೆಂದು ಪೊಲೀಸರು ಹೆಸರಿಸಿದ್ದಾರೆ.