ಅಕ್ಷಯ್ ಈಗ ಭಾರತದ ಅತ್ಯಂತ ದುಬಾರಿ ನಟ

Update: 2016-06-12 08:46 GMT

ಮುಂಬೈ, ಜೂ 12 : ಭಾರತದ ಅತ್ಯಂತ ದುಬಾರಿ ನಟ ಯಾರು ಗೊತ್ತೇ ? ಮತ್ಯಾರು, ಸೂಪರ್ ಸ್ಟಾರ್ ರಜನಿಕಾಂತ್ ಎಂಬುದು ನಿಮ್ಮ ಉತ್ತರವಾಗಿದ್ದರೆ ಅದು ತಪ್ಪು ಉತ್ತರ ! ಸದ್ಯ ಈ ಪ್ರಶ್ನೆಗೆ ಸರಿ ಉತ್ತರ - ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ . 

ಏಶ್ಯಾದಲ್ಲೇ ಜಾಕಿ ಚಾನ್ ಬಿಟ್ಟರೆ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ದಾಖಲೆ ತಲೈವರ್ ರಜನಿ ಹೆಸರಲ್ಲಿದೆ. ಮೂಲಗಳ ಪ್ರಕಾರ ಅವರಿಗೆ ಒಂದು ಚಿತ್ರಕ್ಕೆ 80 ಕೋಟಿಗೂ ಹೆಚ್ಚು ಸಂಭಾವನೆ ಸಿಗುತ್ತದೆ. ಹಾಗಾಗಿ ಅಮಿತಾಭ್, ಶಾರುಖ್ , ಸಲ್ಮಾನ್ , ಆಮಿರ್ , ಅಕ್ಷಯ್ ಸಹಿತ ಬಾಲಿವುಡ್ ನ ಘಟಾನುಘಟಿಗಳು ಈ ವಿಷಯದಲ್ಲಿ ರಜನಿಗಿಂತ ಬಹಳ ಹಿಂದಿದ್ದರು. ಈಗ ಆ ದಾಖಲೆಯನ್ನು ಕಿಲಾಡಿ ಅಕ್ಷಯ್ ಮುರಿದಿದ್ದಾರೆ. 

2010 ರ ಬ್ಲಾಕ್ ಬಸ್ಟರ್ ಚಿತ್ರ ಎಂದಿರನ್ ನ ಮುಂದಿನ ಭಾಗ ಎಂದಿರನ್ 2 ಚಿತ್ರದಲ್ಲಿ ವಿಲನ್ ಪಾತ್ರಕ್ಕಾಗಿ ಅಕ್ಷಯ್ ಕುಮಾರ್ ಗೆ ಚಿತ್ರದ ನಾಯಕ ರಜನಿ ಗಿಂತಲೂ ಹೆಚ್ಚು ' ಬಹುದೊಡ್ಡ ಮೊತ್ತ ' ನೀಡಲಾಗಿದೆ. 

ಇದು ಎಷ್ಟು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಚಿತ್ರದ ನಿರ್ಮಾಣ ಮಾಡುತ್ತಿರುವ ಲಿಕಾ ಪ್ರೊಡಕ್ಷನ್ಸ್ ನವರು ಹಾಲಿವುಡ್ ನ ಅರ್ನಾಲ್ಡ್ ಶ್ವಾಸ್ ನಗರ್ ಅವರನ್ನು ವಿಲನ್ ಮಾಡುವ ಯೋಜನೆಯಲ್ಲಿದ್ದರು. ಕೊನೆಗೆ ಬಾಲಿವುಡ್ ನ ಮಹಾ ಕಿಲಾಡಿ ಅಕ್ಷಯ್ ಆ ಪಾತ್ರಕ್ಕೆ ಬಂದಿದ್ದಾರೆ. ಆದರೆ ರಜನಿಯ ಎದುರು ರಜನಿಯ ದಾಖಲೆಯನ್ನೇ ಮುರಿದ ಬಳಿಕ ನಟಿಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News