×
Ad

ಜಿಶಾರ ಮೊಬೈಲ್‌ಗೆ ಕರೆಮಾಡಿದ್ದ ಹೊರರಾಜ್ಯದ ಕಾರ್ಮಿಕನ ರೇಖಾ ಚಿತ್ರಕ್ಕೆ ಸಿದ್ಧತೆ

Update: 2016-06-15 11:10 IST

ಕೊಚ್ಚಿ, ಜೂನ್ 15: ಪೆರುಂಬಾವೂರಿನಲ್ಲಿ ಹತ್ಯೆಗೈಯಲಾದ ಕಾನೂನು ವಿದ್ಯಾರ್ಥಿನಿ ಜಿಶಾರ ಮೊಬೈಲ್‌ಫೋನ್‌ಗೆ ಕರೆಮಾಡಿದ ಹೊರರಾಜ್ಯದ ಕಾರ್ಮಿಕನ ರೇಖಾ ಚಿತ್ರ ತಯಾರಿಯ ಸಿದ್ಥತೆ ನಡೆಯುತ್ತಿದೆ. ಜಿಶಾರ ಮನೆ ನಿರ್ಮಾಣಕ್ಕೆ ಬಂದಿದ್ದ ಬಂಗಾಳಿ ಯುವಕನ ಮೊಬೈಲ್ ಫೋನ್‌ನಿಂದಹೊರರಾಜ್ಯದ ಇನ್ನೊಬ್ಬ ಕಾರ್ಮಿಕ ಫೋನ್ ಕರೆಮಾಡಿದ್ದ,ಆತನ ರೇಖಾಚಿತ್ರವನ್ನು ಬಂಗಾಳಿ ಕಾರ್ಮಿಕನ ಸಹಾಯ ಪಡೆದು ತಯಾರಿಸಲು ಪೊಲೀಸರು ಸಿದ್ಧರಾಗಿದ್ದಾರೆ. ಬಂಗಾಳಿ ಯುವಕನನ್ನು ಈ ಮೊದಲಿನ ತನಿಖಾ ತಂಡ ಪ್ರಶ್ನಿಸಿದ್ದರೂ ತನ್ನ ಫೋನ್‌ನಿಂದ ಕರೆ ಮಾಡಿದ ವ್ಯಕ್ತಿಯಾರೆಂದು ತನಗೆ ಗೊತ್ತಿಲ್ಲ ಎಂದು ಹೇಳಿದ್ದ.ಆದರೆ ಈ ಯುವಕನಿಗೆ ಗೊತ್ತಿಲ್ಲದೆ ಯಾರೂ ಈತನ ಫೋನ್‌ನಲ್ಲಿ ಜಿಶಾರಿಗೆ ಕರೆಮಾಡಲು ಸಾಧ್ಯವಿಲ್ಲ ಎಂದು ಪೊಲೀಸರು ತರ್ಕಿಸಿದ್ದಾರೆ.ಆದ್ದರಿಂದ ಬಂಗಾಳಿಯಿಂದ ಆತನ ಕುರಿತು ಮಾಹಿತಿ ಪಡೆದು ರೇಖಾ ಚಿತ್ರ ತಯಾರಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಈ ನಡುವೆ ಪೆರುಂಬಾವೂರಿನ 150 ಮೊಬೈಲ್ ಅಂಗಡಿಗಳಿಂದ ನಿನ್ನೆ ಪೊಲೀಸರು ಸಾಕ್ಷ್ಯ ಸಂಗ್ರಹಿಸಿದ್ದಾರೆ.ಹೆಚ್ಚು ಹಣಕೊಟ್ಟು ಅಥವಾ ಸ್ಪಷ್ಟ ದಾಖಲೆಗಳಿಲ್ಲದೆ ತಮ್ಮಿಂದ ಯಾರೂ ಸಿಮ್ ಪಡೆದಿಲ್ಲ ಎಂದು ಅಂಗಡಿಗಳವರು ಪೊಲೀಸರಿಗೆ ತಿಳಿಸಿದ್ದಾರೆ.

ಈ ನಡುವೆ ಪೊಲೀಸ್ ತಯಾರಿಸಿದ ಎರಡನೆ ರೇಖಾಚಿತ್ರಕ್ಕೆ ಹೋಲಿಕೆಯಿರುವ ಪೆರುಂಬಾವೂರಿನ ವ್ಯಕ್ತಿಯನ್ನು ಪತ್ತಣತಿಟ್ಟಂನಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಶಾರ ಪರಿಚಯ ಇರುವ ಈತನನ್ನು ಪ್ರಶ್ನಿಸಲಾಗುತ್ತಿದೆ. ಅದೇ ವೇಳೆ ಸೋಮವಾರ ಊರವರೇ ಹಿಡಿದು ಕೊಟ್ಟಿದ್ದ ಗುಜರಾತ್‌ನ ವ್ಯಕ್ತಿಯನ್ನು ಪೊಲೀಸರು ಬಿಟ್ಟಿದ್ದಾರೆ. ಆದರೆ ಆತನ ರಕ್ತದ ಸಾಂಪಲ್‌ನ್ನು ಡಿಎನ್‌ಎ ಪರೀಕ್ಷೆಗಾಗಿ ಸಂಗ್ರಹಿಸಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News