×
Ad

ನ್ಯಾಶನಲ್ ಡಿಫೆನ್ಸ್ ಅಕಾಡಮಿಗೆ ಈ ಬಾರಿ ಆಯ್ಕೆಯಾಗಿದ್ದು ಕೇವಲ 7 ಮುಸ್ಲಿಮರು

Update: 2016-06-15 11:44 IST

ಹೊಸದಿಲ್ಲಿ, ಜೂ.15: ಒಟ್ಟು 423 ಅರ್ಹ ಅಭ್ಯರ್ಥಿಗಳಲ್ಲಿ ಕೇವಲ 13 ಮಂದಿ ಮುಸ್ಲಿಮರು ಈ ಬಾರಿಯ ನ್ಯಾಶನಲ್ ಡಿಫೆನ್ಸ್ ಅಕಾಡಮಿಗೆ ಹಾಗೂ ನೇವಲ್ ಅಕಾಡಮಿಗೆೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಅವರಲ್ಲಿ ಏಳು ಮಂದಿ ಡಿಫೆನ್ಸ್ ಅಕಾಡಮಿಗೆ ಆಯ್ಕೆಯಾಗಿದ್ದಾರೆ. ಈ ಸಂಸ್ಥೆಗೆ ಪ್ರವೇಶ ಪಡೆಯುವ ಮುಸ್ಲಿಮರ ಸಂಖ್ಯೆ ಕೇವಲ 1.65 ಶೇ.. ಮುಸ್ಲಿಮ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಆಖಿಬ್ ಖುರ್ಷಿದ್ 10ನೆ ರ್ಯಾಂಕ್ ಪಡೆದಿದ್ದಾರೆ.

ಕಳೆದ ವರ್ಷ 16 ಮುಸ್ಲಿಮರು ಪ್ರವೇಶಾತಿಗೆ ಅರ್ಹತೆ ಪಡೆದಿದ್ದು ಒಟ್ಟು ಅಭ್ಯರ್ಥಿಗಳಲ್ಲಿ 3.53 ಶೇ. ಪಾಲು ಅವರದಾಗಿತ್ತಲ್ಲದೆ, 2006ರಿಂದ ಅವರು ಪಡೆದ ಅತ್ಯಧಿಕ ಪಾಲು ಇದಾಗಿತ್ತು.

ನ್ಯಾಶನಲ್ ಡಿಫೆನ್ಸ್ ಅಕಾಡಮಿ ಪ್ರವೇಶಾತಿಗಾಗಿ ಕೇಂದ್ರ ಲೋಕಸೇವಾ ಆಯೋಗ ವಾರ್ಷಿಕ ಎರಡು ಬಾರಿ ಪರೀಕ್ಷೆ ನಡೆಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಪ್ರವೇಶಾತಿ ಪಡೆಯುವ ಮುಸ್ಲಿಮ್ ಅಭ್ಯರ್ಥಿಗಳ ಸಂಖ್ಯೆ ಶೇ. ಒಂದರ ಸುತ್ತಮುತ್ತ ಇದ್ದರೆ, ಕೇವಲ 2010ರಲ್ಲಿ ಅವರ ಪಾಲು 2ಶೇ. ದಾಟಿತ್ತು. ಆ ವರ್ಷ ಒಟ್ಟು ಅರ್ಹ 742 ಅಭ್ಯರ್ಥಿಗಳಲ್ಲಿ 17 ಮಂದಿ ಆಯ್ಕೆಯಾಗಿದ್ದರು.

ನ್ಯಾಷನಲ್ ಡಿಫೆನ್ಸ್ ಅಕಾಡಮಿಯ 136ನೆ ಕೋರ್ಸಿಗೆ ಹಾಗೂ ಇಂಡಿಯನ್ ನೇವಲ್ ಅಕಾಡಮಿಯ 98ನೆ ಕೋರ್ಸಿಗೆ ಅಯ್ಕೆಯಾದ ಮುಸ್ಲಿಂ ಅಭ್ಯರ್ಥಿಗಳ ಹೆಸರು ಕೆಳಗೆ ನೀಡಲಾಗಿದೆ. ಆಖಿಬ್ ಖುರ್ಷೀದ್ ಲೊನೆ 10ನೆ ರ್ಯಾಂಕ್ ಪಡೆದಿದ್ದರೆ, ಎಂ.ಡಿ. ಅಬ್ದುಲ್ ಕಲಾಂ, ಶಾಹಿದ್ ನಝೀರ್, ಇಂಝಮಾಮ್ ಅಲಿ ಸಿದ್ದೀಕಿ, ಅಸಿಫ್ ರಾಝಾ, ಖುರ್ಷಿದ್ ಆಲಂ ಹಾಗೂ ಎಂ.ಡಿ. ಸಾಖಿಬ್ 54ನೆ, 96ನೆ, 148, 177 ಹಾಗೂ 218 ನೆ ರ್ಯಾಂಕ್ ಪಡೆದಿದ್ದಾರೆ.

ಡೆಹ್ರಾಡೂನ್ ಇಂಡಿಯನ್ ಮಿಲಿಟರಿ ಅಕಾಡಮಿ ಸೇರುವ ಸಲುವಾಗಿ ನಡೆಸಲಾಗುವ ಕಂಬೈನ್ಡ್ ಡಿಫೆನ್ಸ್ ಸರ್ವಿಸಸ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ 166 ಅಭ್ಯರ್ಥಿಗಳಲ್ಲಿ 3 ಮಂದಿ ಮುಸ್ಲಿಮರು ಆಯ್ಕೆಯಾಗಿದ್ದಾರೆ. ಜಮ್ಶೆದ್ ನಾಸಿರ್, ಮುಹಮ್ಮದ್ ಜುನೈದ್ ಖಾನ್ ಹಾಗೂ ಮುಹಮ್ಮದ್ ಝುಬೈರ್ ತಲಾ 60, 159 ಹಾಗೂ 163ನೆ ಸ್ಥಾನ ಪಡೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News