ಅಶ್ಲೀಲ ಮೆಸೇಜು ರವಾನಿಸಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯ ವಜಾ!
ಜೆಮ್ಶೆಡ್‌ಪುರ,ಜೂನ್, 15: ಜಾರ್ಖಂಡ್ ಜಮ್ಶೆಡ್‌ಪುರಮಹಿಳಾ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷೆ ವಾಟ್ಸ್‌ಆ್ಯಪ್ ಮೂಲಕ ಅಶ್ಲೀಲ ಚಿತ್ರವನ್ನು ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವರೊಬ್ಬರಿಗೆ ರವಾನಿಸಿದ್ದು ಅವರನ್ನು ಜಿಲ್ಲಾಧ್ಯಕ್ಷೆ ಸ್ಥಾನದಿಂದ ವಜಾಗೊಳಿಸಲಾಗಿದೆ. ಮಹಿಳಾ ಜಿಲ್ಲಾಕಾಂಗ್ರೆಸ್ ಅಧ್ಯಕ್ಷೆ ಮಂಜಿತ್ ಆನಂದ್ ಅಶ್ಲೀಲ ಚಿತ್ರವನ್ನು ಕಳುಹಿಸಿದ ಮಹಿಳೆಯಾದರೆ ಮಾಜಿ ಸಚಿವ ದುಲಾಲ್ ಭುಯಿಯರಿಗೆ ಅಶ್ಲೀಲ್ ಮೆಸೇಜ್ ಸೆಂಡ್ ಆಗಿತ್ತು. ಮಾತ್ರವಲ್ಲ ಮಂಜಿತ್ ಕಳುಹಿಸಿದ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ನಿಟ್ಟಿನಲ್ಲಿ ಜಾರ್ಖಂಡ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಆಭಾ ಸಿನ್ಹಾ ಮಂಜಿತ್ ವಿರುದ್ಧ ಕ್ರಮಕೈಗೊಂಡು ಜಿಲ್ಲಾಧ್ಯಕ್ಷೆ ಸ್ಥಾನದಿಂದ ವಜಾಗೊಳಿಸಿದ್ದಾರೆ.
ಮಂಜಿತ್ ಜೂನ್ ಹತ್ತರಂದು ದುಲಾಲ್‌ರ ಹೆಸರಿಗೆ ಅಶ್ಲೀಲ ಫೋಟೊ ವಾಟ್ಸ್‌ಆ್ಯಪ್ ಮೂಲಕ ಶೇರ್ ಮಾಡಿದ್ದರು. ಮಾತ್ರವಲ್ಲ ದುಲಾಲ್‌ರಿಗೆ ಫೋನ್ ಮಾಡಿ ಈ ವಿಷಯವನ್ನು ತಿಳಿಸಿದ್ದರು. ಈ ಫೋಟೊ ಹತ್ತು ನಿಮಿಷದೊಳಗೆ ಜಿಲ್ಲಾ ಕಾಂಗ್ರೆಸ್ ನಾಯಕರ ನಡುವೆ ವೈರಲಾಗಿತ್ತು. ಆನಂತರ ಮಂಜಿತ್ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಯಾರೇ ಫೋನ್ ಮಾಡಿದರೂ ಎತ್ತಿಲ್ಲ. ಮಹಿಳಾ ಕಾಂಗ್ರೆಸ್ ಪ್ರದೇಶಾಧ್ಯಕ್ಷೆ ಆಭಾ ಸಿನ್ಹಾ ತನಿಖೆ ನಡೆಸಿದ್ದು ಮಂಜಿತ್‌ರ ಫೋನ್‌ನಿಂದಲೇ ಅಶ್ಲೀಲ ಫೋಟೊ ಹೋಗಿರುವುದು ಗೊತ್ತಾಗಿತ್ತು.