×
Ad

ಬಾಲಕಿಗೆ ಅಶ್ಲೀಲ ಕರೆ ಮಾಡಿದವನನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿದರು !

Update: 2016-06-15 12:35 IST

ಮುಂಬೈ, ಜೂ.15: ಹದಿನೈದು ವರ್ಷದ ಬಾಲಕಿಯೊಬ್ಬಳಿಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದ ವ್ಯಕ್ತಿಯೊಬ್ಬನನ್ನು ಮಹಾರಾಷ್ಟ್ರ ನವನಿರ್ಮಾಣ್ ಸೇನೆಯ ಮಹಿಳಾ ಕಾರ್ಯಕರ್ತೆಯರು ನಗ್ನಗೊಳಿಸಿ ಮೆರವಣಿಗೆ ಮಾಡಿದ ಘಟನೆ ಥಾಣೆಯಲ್ಲಿ ನಡೆದಿದೆ.

ಆರೋಪಿ ಸುಶೀಲ್ ಕುಮಾರ್ ಜೈಸ್ವಾಲ್ (21) ಕಳೆದ 10-12 ದಿನಗಳಿಂದ ಬಾಲಕಿಯೋರ್ವಳಿಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದನೆನ್ನಲಾಗಿದೆ. ಬಾಲಕಿ ಆರು ದಿನಗಳ ಹಿಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಏನೂ ಪ್ರಯೋಜನವಾಗಿರಲಿಲ್ಲ.

ಆಕೆಯ ಸಂಬಂಧಿಯೊಬ್ಬರು ಎಂಎನ್‌ಎಸ್‌ನಲ್ಲಿದ್ದು ಅಲ್ಲಿನ ಕಾರ್ಯಕರ್ತೆಯರಿಗೆ ಈ ವಿಷಯ ತಿಳಿಸಿದ್ದು, ಅವರು ಆತನಿಗೆ ಕರೆ ಮಾಡಿ ತಾವು ಫೈನಾನ್ಸ್ ಕಂಪೆನಿಯೊಂದರಿಂದ ಮಾತನಾಡುತ್ತಿದ್ದೇವೆ ಎಂದು ಹೇಳಿ ಆತನನ್ನು ಐರೋಳಿ ನಿಲ್ದಾಣ ಸಮೀಪದ ಪ್ರದೇಶವೊಂದಕ್ಕೆ ಕರೆಸಿಕೊಂಡಿದ್ದರು.

ಬಾಲಕಿ ಮತ್ತಾಕೆಯ ಕುಟುಂಬ ಈತನೇ ಅಶ್ಲೀಲ ಕರೆ ಮಾಡುತ್ತಿದ್ದವನೆಂದು ಗುರುತಿಸಿದ ಕೂಡಲೇ ಅವರು ಆತನನ್ನು ವಿವಸ್ತ್ರಗೊಳಿಸಿ, ಚೆನ್ನಾಗಿ ಥಳಿಸಿ ಥಾಣೆ ಪೊಲೀಸ್ ಠಾಣೆಯವರೆಗೆ ಮೆರವಣಿಗೆ ನಡೆಸಿ ಆತನನ್ನು ಪೊಲೀಸರಿಗೊಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News