ಕಾಶ್ಮೀರ ವಿವಿ ಕ್ಯಾಂಪಸ್ ವಿಸ್ತರಣೆಗೆ ಸೇನೆಯ ಭೂಮಿ ನೀಡಲು ಪ್ರಧಾನಿ ಒಪ್ಪಿಗೆ
Update: 2016-06-15 22:25 IST
ಹೊಸದಿಲ್ಲಿ,ಜೂ.15: ಅನಂತನಾಗ್‌ನಲ್ಲಿ ಕಾಶ್ಮೀರ ವಿವಿಯ ಕ್ಯಾಂಪಸ್‌ನ ವಿಸ್ತರಣೆಗಾಗಿ ಸೇನೆಯ ವಶದಲ್ಲಿರುವ ಸುಮಾರು 458 ಕನಾಲ್(ಎಂಟು ಕನಾಲ್‌ಗಳೆಂದರೆ ಒಂದು ಎಕರೆ) ಭೂಮಿಯನ್ನು ತೆರವುಗೊಳಿಸಬೇಕೆಂಬ ಜಮ್ಮು-ಕಾಶ್ಮೀರ ಸರಕಾರದ ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿಯವರು ಒಪ್ಪಿಗೆ ನೀಡಿದ್ದಾರೆ.
ಪಂಚರಾಷ್ಟ್ರಗಳ ಪ್ರವಾಸದಿಂದ ಹಿಂದಿರುಗಿದ ಬಳಿಕ ಕಾಶ್ಮೀರ ಕುರಿತಂತೆ ಸಭೆಯೊಂದನ್ನು ಕರೆದಿದ್ದ ಮೋದಿ ಅವರು ಆದಷ್ಟು ಶೀಘ್ರ ಅನಂತನಾಗ್‌ನಲ್ಲಿಯ ಭೂಮಿಯನ್ನು ರಾಜ್ಯಕ್ಕೆ ಹಸ್ತಾಂತರಿಸುವಂತೆ ರಕ್ಷಣಾ ಸಚಿವಾಲಯಕ್ಕೆ ಸೂಚಿಸಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.