×
Ad

ಸೆನ್ಸಾರ್ ಮಂಡಳಿಯೇ ‘ಉಡ್ತಾ ಪಂಜಾಬ್’ನ್ನು ಸೋರಿಕೆ ಮಾಡಿದ್ದರೆ ಭಾರೀ ನಾಚಿಕೆಗೇಡು:ಆಮಿರ್

Update: 2016-06-16 23:30 IST

ಲುಧಿಯಾನಾ(ಪಂಜಾಬ್),ಜೂ.16 ಬೆಳ್ಳಿತೆರೆಯಲ್ಲಿ ಇನ್ನಷ್ಟೇ ಪ್ರದರ್ಶನಗೊಳ್ಳಬೇಕಿರುವ ‘ಉಡ್ತಾ ಪಂಜಾಬ್ ’ ಚಿತ್ರವು ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ ಬಗ್ಗೆ ಗುರುವಾರ ಇಲ್ಲಿ ಕಳವಳ ವ್ಯಕ್ತಪಡಿಸಿದ ಖ್ಯಾತ ಬಾಲಿವುಡ್ ನಟ ಆಮಿರ್ ಖಾನ್ ಅವರು, ಸೋರಿಕೆಯಾಗಿರುವುದು ಸೆನ್ಸಾರ್ ಆಗಿರುವ ಪ್ರತಿಯಾಗಿದ್ದರೆ ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿ(ಸಿಬಿಎಫ್‌ಸಿ)ಗೆ ಅದರಷುದೊಡ್ಡ ನಾಚಿಕೆಗೇಡಿನ ವಿಷಯ ಬೇರೊಂದಿಲ್ಲ ಎಂದು ಹೇಳಿದರು. ಆಮಿರ್ ತನ್ನ ಮುಂಬರುವ ಚಿತ್ರ ‘ದಂಗಲ್’ನ ಶೂಟಿಂಗ್‌ಗಾಗಿ ನಗರದಲ್ಲಿದ್ದಾರೆ.
ಚಿತ್ರದ ಬಿಡುಗಡೆಗೆ ತಡೆಯಾಜ್ಞೆಯನ್ನು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಿದ ಪಂಜಾಬ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದ ನಿರ್ಧಾರವನ್ನು ಅವರು ಸ್ವಾಗತಿಸಿದರು.
ಜನತೆಗೆ ಯಾವುದು ಸೂಕ್ತವೋ ಅದನ್ನೇ ತೋರಿಸಬೇಕಾದ ಹೊಣೆ ಕಲಾವಿದರು ಮತ್ತು ನಿರ್ದೇಶಕರ ಮೇಲೂ ಇರುತ್ತದೆ ಎಂದು ಅವರು ಇದೇ ವೇಳೆ ನುಡಿದರು.
ಪೈರೆಸಿ ಮತ್ತು ಆನ್‌ಲೈನ್‌ನಲ್ಲಿ ಚಿತ್ರಗಳ ಡೌನ್‌ಲೋಡ್ ಕುರಿತು ಮಾತನಾಡಿದ ಅವರು,ಚಲನಚಿತ್ರೋದ್ಯಮವು ದಶಕಗಳಿಂದಲೂ ಪೈರೆಸಿಯ ವಿರುದ್ಧ ಹೋರಾಡುತ್ತಲೇ ಬಂದಿದೆ. ಅದು ಕಳ್ಳತನ ಎನ್ನುವುದನ್ನು ವೀಕ್ಷಕರು ಅರಿತುಕೊಂಡಿಲ್ಲ ಎನ್ನುವುದು ನನಗೆ ಅಚ್ಚರಿಯನ್ನುಂಟು ಮಾಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News