ಭಾರತ ವಿಶ್ವದ ಅತ್ಯಂತ ಕುಶಲ ಆರ್ಥಿಕ ತಜ್ಞನನ್ನು ಕಳೆದುಕೊಳ್ಳುತ್ತಿದೆ : ಅಮರ್ತ್ಯ ಸೇನ್ ವಿಷಾದ

Update: 2016-06-19 18:17 GMT

ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರು ಎರಡನೇ ಅವಧಿಗೆ ಮುಂದುವರಿಯಲು ಕೋರಿಕೆ ಇಡದೆ ಇರುವುದು ವಿಷಾದ ಎಂದು ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್ ಹೇಳಿದ್ದಾರೆ. ವಿಶ್ವದಲ್ಲೇ ಅತೀ ಕುಶಲ ಆರ್ಥಿಕ ಚಿಂತಕರೊಬ್ಬರನ್ನು ಭಾರತ ಕಳೆದುಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ. ವಿಶ್ವದಲ್ಲೇ ಅತೀ ಕುಶಲ ಆರ್ಥಿಕ ಚಿಂತಕರೊಬ್ಬರನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ದೇಶಕ್ಕೆ ಇದು ವಿಷಾದ ಮತ್ತು ದೇಶದ ಸರ್ಕಾರದ ಮಟ್ಟಿಗೂ ದೊಡ್ಡ ವಿಪರ್ಯಾಸ. ಆರ್‌ಬಿಐ ಪೂರ್ಣವಾಗಿ ಸ್ವಾಯತ್ತ ಸಂಸ್ಥೆಯಲ್ಲ ಎಂದು ಸೇನ್ ಹೇಳಿದ್ದಾರೆ. ಬಿಜೆಪಿ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ ಹಲವು ಬಾರಿ ರಾಜನ್ ಮೇಲೆ ವಾಗ್ದಾಳಿ ನಡೆಸಿರುವುದನ್ನು ಉಲ್ಲೇಖಿಸಿದ ಅವರು, ಆಡಳಿತ ಪಕ್ಷದ ಕೆಲವು ಪಕ್ಷಗಳು ರಘುರಾಮ್ ರಾಜನ್ ಮೇಲೆ ಕೆಂಡ ಕಾರುತ್ತಿರುವುದು ನಿಜ. ನಾನು ಸ್ವತಃ ನೋಡದೆ ಇದ್ದರೂ ಬೇರೆಯವರು ನನಗೆ ಹೇಳಿ ಅಷ್ಟು ಅರ್ಥ ಮಾಡಿಕೊಂಡಿದ್ದೇನೆ. ಅದು ನಿಜಕ್ಕೂ ದುರದೃಷ್ಟ ಎಂದು ಸೇನ್ ಹೇಳಿದ್ದಾರೆ.

ನರೇಂದ್ರ ಮೋದಿ ಸರ್ಕಾರದ ಬಗ್ಗೆ ತಮಗೆ ಹೆಚ್ಚೇನೂ ಉತ್ತಮ ಅಭಿಪ್ರಾಯವಿಲ್ಲ ಎಂದು ಹೇಳಿದ ಅರ್ಥಶಾಸ್ತ್ರಜ್ಞ ಸೇನ್, ಆಡಳಿತ ವಾಸ್ತವದಲ್ಲಿ ಎಂತಹ ನೀತಿಯನ್ನು ಹೊಂದಿರಬೇಕು ಎನ್ನುವುದನ್ನು ನಿರ್ಧರಿಸಬೇಕಿದೆ ಎಂದರು. ರಾಜನ್ ತಮ್ಮ ಅವಧಿ ಮುಗಿದ ಮೇಲೆ ಮತ್ತೆ ಶೈಕ್ಷಣಿಕ ಕ್ಷೇತ್ರಕ್ಕೆ ತೆರಳುವುದಾಗಿ ಹೇಳಿದ್ದಾರೆ. ಸರ್ಕಾರದ ಜೊತೆಗೆ ಸಂವಾದ ನಡೆಸಿದ ಮೇಲೆ ನನ್ನ ನಿರ್ಧಾರ ಬಲವಾಗಿದೆ. ಸೆಪ್ಟೆಂಬರ್ 4ರಂದು ಮುಗಿಯುವ ನನ್ನ ಅವಧಿಯ ನಂತರ ನಾನು ಶೈಕ್ಷಣಿಕ ಕ್ಷೇತ್ರದ ಕಡೆಗೆ ತೆರಳುತ್ತೇನೆ ಎಂದು ರಾಜನ್ ತಮ್ಮ ಸಿಬ್ಬಂದಿಗಳಿಗೆ ಸಂದೇಶದಲ್ಲಿ ಹೇಳಿದ್ದಾರೆ.

ಕೃಪೆ: http://indianexpress.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News