ಕೇರಳ ಅತ್ಯಚಾರ ಪ್ರಕರಣ: ಆರೋಪಿಯ ಹಿಂದೆ ಬಾಹ್ಯ ಶಕ್ತಿಗಳ ಕೈವಾಡ ಶಂಕೆ!
ಕೊಚ್ಚಿ, ಜೂನ್ 20: ದಲಿತ ಕಾನೂನು ವಿದ್ಯಾರ್ಥಿನಿ ಜಿಶಾ ಕೊಲೆ ಆರೋಪಿ ಅಮೀರುಲ್ ಇಸ್ಲಾಮ್‌ನ ಹಿಂದೆ ಬಾಹ್ಯ ಶಕ್ತಿಗಳು ಕೈಯಾಡಿಸಿವೆಯೇ ಎಂದು ಪೊಲೀಸ್‌ರಲ್ಲಿ ಇದೀಗ ಸಂದೇಹ ಬಲವಾಗಿದೆ. ಆರೋಪಿಯನ್ನು ಕೋರ್ಟ್‌ನಿಂದ ಕಸ್ಟಡಿಗೆ ಪಡೆದ ಮೇಲೆ ಈ ದಿಕ್ಕಿನಲ್ಲಿ ತನಿಖೆ ಸಾಗಲಿದೆ ಎಂದು ಹಿರಿಯ ಅಧಿಕಾರಿ ಪತ್ರಿಕೆಗೆ ತಿಳಿಸಿದ್ದಾರೆ. ಜೊತೆಗೆ ಸೋಮವಾರ ಅಥವಾ ಮಂಗಳವಾರ ಕಾಕ್ಕನಾಡ್ ಜೈಲಿನಲ್ಲಿ ಗುರುತು ಹಚ್ಚುವ ಪೆರೇಡ್ ನಡೆಯಲಿದೆ. ನಂತರ ಆರೋಪಿಯನ್ನು ಪುನಃ ಕೋರ್ಟ್‌ನಲ್ಲಿ ಹಾಜರು ಪಡಿಸಲಾಗುವುದು. ಆನಂತರ ಕಸ್ಟಡಿಗೆ ಪಡೆಯಲಾಗುವುದು. ಗುರುತು ಹಚ್ಚುವ ಪೆರೇಡ್‌ನ ಸಾಕ್ಷಿಗಳಿಗೆ ಸಮನ್ಸ್ ನೀಡಲಾಗದೆ. ಕುನ್ನುಪುರಂ ಜುಡಿಷಿಯಲ್ ಪಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ಶಿಬು ಡ್ಯಾನಿಯಲ್‌ರ ಉಪಸ್ಥಿತಿಯಲ್ಲಿ ಗುರುತಿಸುವ ಪೆರೇಡ್ ನಡೆಯುವುದು. ಆರೋಪಿಯ ಜೊತೆ ವಾಸಿಸಿದ್ದ ಮುನೀರುಲ್ ಜಮಾಲ್, ಸುಜಲ್, ಕಪ್ಪು ಚಪ್ಪಲಿ ಖರೀದಿಸಿದ್ದ ಅಂಗಡಿಯ ಮಾಲಕ ಮುಂತಾದವರು ಗುರುತಿಸುವ ಪೆರೇಡ್‌ನಲ್ಲಿ ಸಾಕ್ಷಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಅಮೀರ್ ಗಣಿಗಾರಿಕೆ ಮಾಫಿಯಾದ ಬಾಡಿಗೆ ಕೊಲೆಗಡುಕನೇ ಎಂದು ತನಿಖೆ ಆಗಬೇಕಾಗಿದೆ. ಪೆರುಂಬಾವೂರ್ ಪರಿಸರ ಪ್ರದೇಶದ ಕ್ವಾರಿ, ರಿಯಲ್ ಎಸ್ಟೇಟ್ ಲಾಬಿಗಳು ಈ ಕೊಲೆಯಲ್ಲಿ ಶಾಮೀಲಾಗಿವೆಯೇ ಎಂದು ತನಿಖೆ ನಡೆಯಬೇಕಾಗಿದೆ. ಇವುಗಳ ವಿರುದ್ಧ ನಿರಂತರ ದೂರು ನೀಡುವುದು ಜಿಶಾ ಆಗಿರಬಹುದೆಂದು ಇವರಿಗೆ ಸಂದೇಹ ಇತ್ತೆನ್ನಲಾಗಿದೆ. ಇವುಗಳ ವಿರುದ್ಧ ನಡೆದ ಹೋರಾಟವೊಂದಕ್ಕೆ ಜಿಶಾ ನೇತೃತ್ವನ್ನು ನೀಡಿದ್ದರು. ಈ ನಿಟ್ಟಿನಲ್ಲಿ ಪರೋಕ್ಷವಾಗಿ ಜಿಶಾರ ಕಥೆ ಮುಗಿಸಿವೆಯೇ ಎಂದು ತನಿಖೆ ಮೂಲಕ ಬಹಿರಂಗವಾಗಬೇಕಾಗಿದೆ.