×
Ad

ಇನ್ನು ಪಾಸ್‌ಪೋರ್ಟ್‌ಗೆ ಪೊಲೀಸ್ ವೆರಿಫಿಕೇಶನ್ ಅಗತ್ಯವಿಲ್ಲ: ಸರಿಯಾದ ದಾಖಲೆ ಸಲ್ಲಿಸಿದರೆ ಸಾಕು - ಸುಷ್ಮಾಸ್ವರಾಜ್

Update: 2016-06-20 11:38 IST

ಹೊಸದಿಲ್ಲಿ, ಜೂನ್ 20: ಅರ್ಜಿ ಹಾಕಿದವರಿಗೆ ಪಾಸ್‌ಪೋರ್ಟ್ ಪಡೆಯಲು ಅಡ್ಡಿಯಾಗುವ ಪೊಲೀಸ್ ವೆರಿಫಿಕೇಶನ್ ಸರಳಗೊಳಿಸಲು ವಿದೇಶ ಸಚಿವಾಲಯ ನಿರ್ಧರಿಸಿದೆ. ಸರಿಯಾದ ದಾಖಲೆಗಳನ್ನು ಸಲ್ಲಿಸಿದರೆ ವೆರಿಫಿಕೇಶನ್ ಅಗತ್ಯವೇ ಇಲ್ಲ ಎಂದು ಸಚಿವೆ ಸುಷ್ಮಾಸ್ವರಾಜ್ ಹೇಳಿದ್ದಾರೆ. ಪಾಸ್‌ಪೋರ್ಟ್ ಸಿಗಲು ಅತ್ಯಂತ ಸುಗಮ ರೀತಿಯನ್ನು ಸರಕಾರ ಜಾರಿಗೆ ತರುವುದಾಗಿ ಅವರು ತಿಳಿಸಿದ್ದಾರೆ. ಕಳೆದ ವರ್ಷ 98 ಲಕ್ಷ ಪಾಸ್‌ಪೋರ್ಟ್‌ಗಳನ್ನು ನೀಡಲಾಯಿತೆಂದು ಸಚಿವೆ ಸುದ್ದಿಗಾರರಿಗೆ ವಿವರಿಸಿದ್ದಾರೆ.

ಸೇವಾಕೇಂದ್ರದಲ್ಲಿಸಲ್ಲಿಸುವ ಅರ್ಜಿ ಜೊತೆ ಪಾನ್ ಕಾರ್ಡ್, ಆಧಾರ್ ಕಾರ್ಡ್. ಡ್ರೈವಿಂಗ್ ಲೈಸನ್ಸ್, ಚುನಾವಣಾ ಗುರುತು ಚೀಟಿ ಇವುಗಳಲ್ಲಿ ಒಂದನ್ನು ನೀಡಿದರೆ ವೆರಿಫಿಕೇಶನ್ ಸುಲಭವಾಗಲಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಈಗ ಪೊಲೀಸ್ ವರದಿ ವಿಳಂಬವಾಗುವುದರಿಂದ ಕೆಲವು ರಾಜ್ಯಗಳಲ್ಲಿ ಪಾರ್ಸ್‌ಪೋಟ್ ಅರ್ಜಿದಾರನ ಕೈಗೆ ಸಿಗಲು ಹೆಚ್ಚು ಸಮಯ ಹಿಡಿಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News