×
Ad

ಪ್ರಮುಖ ಆರೋಪಿ ಮತ್ತು ಪತ್ನಿ ಸೆರೆ

Update: 2016-06-20 23:35 IST

ಪಟ್ನಾ,ಜೂ.20: ಬಿಹಾರ ಇಂಟರ್‌ಮೀಡಿಯೇಟ್ ಪರೀಕ್ಷೆಯ ಟಾಪರ್‌ಗಳ ಹಗರಣದ ರೂವಾರಿಯಾಗಿರುವ ಬಿಹಾರ ಶಾಲಾ ಪರೀಕ್ಷಾ ಮಂಡಳಿಯ ಮಾಜಿ ಅಧ್ಯಕ್ಷ ಲಾಲ್ಕೇಶ್ವರ ಪ್ರಸಾದ ಸಿಂಗ್ ಮತ್ತು ಸಹ ಆರೋಪಿಯಾಗಿರುವ ಅವರ ಪತ್ನಿ, ಜೆಡಿಯು ಮಾಜಿ ಶಾಸಕಿ ಉಷಾ ಸಿನ್ಹಾ ಅವರನ್ನು ವಿಶೇಷ ತನಿಖಾ ತಂಡವು ಸೋಮವಾರ ವಾರಣಾಸಿಯಲ್ಲಿ ಬಂಧಿಸಿದೆ.

ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸಿಂಗ್ 12ನೆ ತರಗತಿಯ ಟಾಪರ್‌ಗಳ ಹಗರಣದಲ್ಲಿ ತನ್ನ ಹೆಸರು ಬಯಲಾದ ತಕ್ಷಣ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಭೂಗತರಾಗಿದ್ದು, ಅವರ ವಿರುದ್ಧ ಪಟ್ನಾ ಸಿವಿಲ್ ನ್ಯಾಯಾಲಯವು ಕಳೆದ ವಾರ ಬಂಧನ ವಾರಂಟ್ ಹೊರಡಿಸಿತ್ತು.
ಉಷಾ ಸಿನ್ಹಾ ಕೂಡ ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬಂದ ಬೆನ್ನಿಗೇ ತಲೆಮರೆಸಿಕೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 10 ಜನರನ್ನು ಬಂಧಿಸಲಾಗಿದೆ ಎಂದು ಪಟ್ನಾ ಎಸ್‌ಎಸ್‌ಪಿ ಮನು ಮಹಾರಾಜ್ ಸುದ್ದಿಗಾರರಿಗೆ ತಿಳಿಸಿದರು.
ಪ್ರಕರಣದ ಇನ್ನೋರ್ವ ಪ್ರಮುಖ ಆರೋಪಿ ಅಮಿತ್ ಕುಮಾರ್ ಅಲಿಯಾಸ್ ಬಚ್ಚಾ ರಾಯ್‌ನನ್ನು 10 ದಿನಗಳ ಹಿಂದೆ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News