ಯೋಗ ಭಾರತೀಯ ಅಲ್ಲ ಅದಕ್ಕೂ ಭಾರತಕ್ಕೂ ಸಂಬಂಧವಿಲ್ಲ: ವಿಶ್ವಸಂಸ್ಥೆಯಲ್ಲಿ ಯೋಗ, ಆಧ್ಯಾತ್ಮಿಕ ಗುರು ಜಗ್ಗಿವಾಸುದೇವ್
ಹೊಸದಿಲ್ಲಿ,ಜೂನ್ 21: ಇಡೀ ಜಗತ್ತು ಭಾರತದ ಪ್ರಧಾನಿ ನರೇಂದ್ರಮೋದಿಯ ಕರೆಯಂತೆ ಅಂತಾರಾಷ್ಟ್ರೀಯ ಯೋಗದಿನ ಆಚರಿಸುತ್ತಿದೆ. ಆದರೆ ಯೋಗ ಮತ್ತು ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ಯೋಗ ಭಾರತೀಯವೂ ಅಲ್ಲ ಅದು ಭಾರತದ್ದೂ ಅಲ್ಲ ಎಂದು ಹೇಳಿ ಅಚ್ಚರಿಯನ್ನು ಸೃಷ್ಟಿಸಿದ್ದಾರೆ.
ವಿಶ್ವಸಂಸ್ಥೆಯ ಯೋಗ ದಿನದ ಸಂದರ್ಭದಲ್ಲಿ ಆಯೋಜಿಸಲಾದ ಅಧಿವೇಶನವನ್ನು ಅವರು ಅಭಿಸಂಬೋಧಿಸಿ ಮಾತಾಡುತ್ತಿದ್ದರು. ಯೋಗ ಸಂಪೂರ್ಣ ವೈಜ್ಞಾನಿಕವಾಗಿದೆ ಮತ್ತು ತಂತ್ರಜ್ಞಾನವೂ ಆಗಿದೆ. ಉತ್ತಮವಾಗಿ ಜೀವನಕ್ಕಾಗಿದೆ ಎಂದು ಅವರು ಹೇಳಿದ್ದಾರೆ."ವಿಜ್ಞಾನ ತನ್ನ ಸಾರ್ವಭೌಮತ್ವಮತ್ತು ಮುಕ್ತಿಯ ಕಾರಣದಿಂದಾಗಿ ಅದು ಭಾರತೀಯ ಆಗಲು ಸಾಧ್ಯವಿಲ್ಲ" ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ವಿಶ್ವಸಂಸ್ಥೆಯ ಕನ್ವವರ್ಸೇಶನ್ ವಿತ್ ಮಾಸ್ಟರ್ಸ್:ಯೋಗ ಫಾರ್ ದಿ ಅಚಿವ್‌ಮೆಂಟ್ ಆಫ್ ಸಬ್ ಸ್ಟೇನಿಬಲ್ ಡೆವಲಪ್‌ಮೆಂಡ್ ಗೋಲ್ಸ್" ವಿಷಯದಲ್ಲಿ ಆಯೋಜಿಸಲಾದ ಅಧಿವೇಶನದಲ್ಲಿ ಜಗತ್ತಿನಾದ್ಯಂತದ ನಾಯಕರು ಹಾಗೂ ಅಧಿಕಾರಿಗಳನ್ನು ಉದ್ದೇಶಿಸಿ ಮಾತಾಡಿದ ಆಧ್ಯಾತ್ಮಿಕ ಗುರು ಇದೊಂದು ಭಾರತೀಯವಾದದ್ದೆಂದು ನಾವು ಇದರಲ್ಲಿ ಹೆಮ್ಮೆ ಪಡಬಹುದು ಆದರೆ ಯೋಗ ಭಾರತದ್ದಲ್ಲ. ಬಾರತದ ಮನವಿ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಘೋಷಿಸುವಂತಾಗಲು ಭಾರತ ಕೊಡುಗೆಯನ್ನು ನೀಡಿದೆ ಎಂಬುದು ನಿಜ. ಇತರದೇಶಗಳಿಗೆ ಹೋಲಿಸಿದರೆ ಇದು ಭಾರತದಲ್ಲಿ ಹೆಚ್ಚು ಬಳಕೆಯಲ್ಲಿದೆ. ಅಧಿವೇಶನದಲ್ಲಿ ಜಗ್ಗಿವಾಸುದೇವ್ ಯೋಗ ವೈಜ್ಞಾನಿಕ ಎಂದು ಬಿಂಬಿಸಿದರಲ್ಲದೇ, ಅದರ ಮಹತ್ವವನ್ನು ವಿವರಿಸಿದರು.
ಆಧ್ಯಾತ್ಮಿಕ ಗುರು ಹಾಗೂ ಈಶಾ ಪೌಂಡೇಶನ್ ಸಂಸ್ಥಾಪಕ ಜಗ್ಗಿ ವಾಸುದೇವ್ ರವರ ಈ ಹೇಳಿಕೆಯಿಂದಾಗಿ ವಿವಾದ ಸ್ಫೋಟವಾಗುವ ಎಲ್ಲ ಸಾಧ್ಯತೆ ಇದೆ ಎನ್ನಲಾಗಿದೆ. ಯಾಕೆಂದರೆ ಯೋಗ ಭಾರತದ್ದೆಂದು ಜಗತ್ತಿನಾದ್ಯಂತ ನಂಬಲಾಗಿದೆ.