ಬಾಲಕಿಯರಿಬ್ಬರ ಸಾಮೂಹಿಕ ಅತ್ಯಾಚಾರ ವಿರೋಧಿಸಿ ಬಿಹಾರದಲ್ಲಿ ಪ್ರತಿಭಟನೆ

Update: 2016-06-23 14:24 GMT

ಮೋತಿಹಾರಿ,ಜೂ.23: ಮೋತಿಹಾರಿ ಜಿಲ್ಲೆಯಲ್ಲಿ 10 ವರ್ಷದ ಓರ್ವಳು ಸೇರಿದಂತೆ ಬಾಲಕಿಯರಿಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರು ವ ಹಿನ್ನೆಲೆಯಲ್ಲಿ ಕ್ರುದ್ಧರಾಗಿರುವ ಬಿಹಾರದ ಜನರು ಸರಕಾರದ ವಿರುದ್ಧ ಪ್ರತಿಭಟಿಸಿ ಬೀದಿಗಿಳಿದಿದ್ದಾರೆ.

ಕಳೆದ ಬುಧವಾರ ಇಬ್ಬರು ದುಷ್ಕರ್ಮಿಗಳಿಂದ ಅತ್ಯಾಚಾರಕ್ಕೊಳಗಾಗಿರುವ 10ರ ಹರೆಯದ ಬಾಲಕಿಯನ್ನು ಪಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಗಂಭೀರ ಶಸ್ತ್ರಚಿಕಿತ್ಸೆಗೊಳಪಡಿಸಲಾಗಿದ್ದು,ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಘಟನೆಯ ಮರುದಿನ ಇಬ್ಬರು ಶಂಕಿತ ಆರೋಪಿಗಳಾದ ಪ್ರಮೋದ ಸಾಹ್ನಿ ಮತ್ತು ಕಮಲ್ ಸಾಹ್ನಿ ಅವರನ್ನು ಪೊಲಿಸರು ಬಂಧಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಜಿಲ್ಲೆಯ ಬೇರೊಂದು ಭಾಗದಲ್ಲಿ ಬಾಲಕಿಯೋರ್ವಳು ಶೌಚಕ್ಕೆ ತೆರಳುತ್ತಿದ್ದಾಗ ಆರೋಪಿಗಳ ಪೈಕಿ ಓರ್ವ ಆಕೆಗೆ ಲೈಂಗಿಕ ಕಿರುಕುಳ ನೀಡಿ ಅದರ ವೀಡಿಯೋ ಚಿತ್ರೀಕರಿಸಿದ್ದ. ಈ ಬಗ್ಗೆ ಆಕೆ ಪೊಲೀಸ್ ದೂರು ದಾಖಲಿಸಿದ್ದಳು. ಇದರಿಂದ ಕೆರಳಿದ ಆತ ತನ್ನ ಕುಟುಂಬದ ಇನ್ನೂ ನಾಲ್ವರೊಂದಿಗೆ ಸೇರಿಕೊಂಡು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾನೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕಿ ಮೋತಿಹಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News