ಆಮ್ ಆದ್ಮಿ- ನಜೀಬ್ 'ಜಂಗ್' ತಾರಕಕ್ಕೆ

Update: 2016-06-24 03:23 GMT

ಹೊಸದಿಲ್ಲಿ, ಜೂ.24: ದಿಲ್ಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ನಡುವಿನ ವೈಮನಸ್ಯ ತಾರಕಕ್ಕೇರಿದ್ದು, ಎನ್‌ಎಂಡಿಸಿ ಅಧಿಕಾರಿಯ ಕೊಲೆ ಪ್ರಕರಣ ಸಂಬಂಧ ಜಂಗ್ ಅವರನ್ನು ಬಂಧಿಸುವಂತೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.

ಇದರ ಜೊತೆಗೆ ಐದು ಹಗರಣಗಳ ಸಂಬಂಧ ಅವರನ್ನು ಪ್ರಶ್ನಿಸಲು ವಿಧಾನಸಬಾ ಸಮಿತಿ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಎನ್‌ಎಂಡಿಸಿ ಎಂ.ಎಂ.ಖಾನ್ ಅವರ ಹತ್ಯೆ ಘಟನೆ ಬಳಿಕ ಆಪ್ ಹಾಗೂ ಜಂಗ್ ನಡುವಿನ ಮುಸುಕಿನ ಗುದ್ದಾಟ ಮತ್ತಷ್ಟು ತೀವ್ರತೆ ಪಡೆದುಕೊಂಡಿತ್ತು. ಹೋಟೆಲ್‌ನ ಲೀಸ್ ಅವಧಿಯನ್ನು ವಿಸ್ತರಿಸುವ ಸಲುವಾಗಿ ನೀಡಿದ ಲಂಚವನ್ನು ಸ್ವೀಕರಿಸಲು ನಿರಾಕರಿಸಿದ ಪ್ರಾಮಾಣಿಕ ಅಧಿಕಾರಿಯನ್ನು ಹತ್ಯೆ ಮಾಡಲಾಗಿತ್ತು.

ಈ ಪ್ರಕರಣದಲ್ಲಿ ಜಂಗ್ ಪಾತ್ರ ಅನುಮಾನಾಸ್ಪದವಾಗಿದೆ. ಖಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಎನ್‌ಎಂಡಿಸಿಗೆ ಏಕೆ ಪತ್ರ ಬರೆಯಬೇಕಿತ್ತು? ತಕ್ಷಣ ಅವರನ್ನು ಬಂಧಿಸಿ, ಹುದ್ದೆಯಿಂದ ವಜಾ ಮಾಡಬೇಕು ಎಂದು ಆಪ್ ದಿಲ್ಲಿ ಘಟಕದ ಸಂಚಾಲಕ ದಿಲೀಪ್ ಪಾಂಡೆ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಈ ಪ್ರಕರಣದ ತನಿಖೆ ಬಗ್ಗೆ ಲೆಫ್ಟಿನೆಂಟ್ ಗವರ್ನರ್‌ಗೆ ವರದಿ ಮಾಡುವ ಬದಲು ಕೇಂದ್ರ ಗೃಹಸಚಿವಾಲಯಕ್ಕೇ ನೇರ ವರದಿ ಮಾಡಬೇಕು ಎಂದೂ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News