ಬಿಹಾರ ಟಾಪರ್ ರೂಬಿ ಮರುಪರೀಕ್ಷೆಯಲ್ಲಿ ಫೇಲ್ , ಬಂಧನ
ಪಾಟ್ನಾ, ಜೂ.22: ಪೊಲಿಟಿಕಲ್ ಸೈನ್ಸ್‌ನಲ್ಲಿ ಅಡುಗೆ ಮಾಡುವುದನ್ನು ಕಲಿಸುತ್ತಾರೆಂದು ಟಿವಿ ವಾಹಿನಿಯೊಂದಕ್ಕೆ ಉತ್ತರಿಸುವ ಮೂಲಕ ವಿವಾದವೊಂದಕ್ಕೆ ಕಾರಣಳಾಗಿದ್ದ ಬಿಹಾರ ಪ್ರೌಢ ಶಿಕ್ಷಣ ಮಂಡಳಿ ಪರೀಕ್ಷೆಯಲ್ಲಿ ‘ಅತಿ ಹೆಚ್ಚು ಅಂಕ’ ಗಳಿಸಿದ್ದ ರುಬಿ ರಾಯ್ ಎಂಬಾಕೆಯನ್ನು ಶನಿವಾರ ಬಿಹಾರ ಶಾಲಾ ಪರೀಕ್ಷಾ ಮಂಡಳಿಯ ಮುಂದೆ ಮರು ಪರೀಕ್ಷೆಗೆ ಹಾಜರಾದ ಬಳಿಕ ಪೊಲೀಸರು ಬಂಧಿಸಿದ್ದಾರೆ.ರಾಯ್ ಹೊರತಾಗಿ, ಮಂಡಳಿಯ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದ ಎಲ್ಲ 14 ಮಂದಿ ಈ ಮೊದಲೇ ಪರಿಣತರ ಸಮಿತಿ ಹಾಗೂ ಬಿಎಸ್‌ಇಬಿಯ ಭ್ರಷ್ಟಾಚಾರ ಬ್ಯೂರೊಗಳ ಮುಂದೆ ಮರು ವೌಲ್ಯಮಾಪನಕ್ಕೆ ಹಾಜರಾಗಿದ್ದರು.ಈ ವಿಷಯದ ಕುರಿತು ಬಿಹಾರ ಸರಕಾರ ಸಿಟ್ ತನಿಖೆಯೊಂದಕ್ಕೆ ಆದೇಶಿಸಿತ್ತು. ಆ ವೇಳೆ ಬಿಶುನ್ ರಾಯ್ ಕಾಲೇಜಿನ ಪ್ರಿನ್ಸಿಪಾಲ್ ಬಚ್ಚಾ ರಾಯ್ ಹಾಗೂ ಇತರ ನಾಲ್ವರನ್ನು ಬಂಧಿಸಲಾಗಿತ್ತು.ಬಿಎಸ್‌ಇಬಿಯ ಮಾಜಿ ಅಧ್ಯಕ್ಚ ಲಾಲ್ಕೇಶ್ವರ ಪ್ರಸಾದ್ ಹಾಗೂ ಆತನ ಪತ್ನಿ ಉಷಾ ಸಿನ್ಹಾ ಎಂಬಾಕೆಯನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗೆ ಬಂಧಿಸಲಾಗಿದೆ.