×
Ad

ಯುವ ಅಥ್ಲೀಟ್‌ನ ಕಣ್ಣುಗುಳಿಯೊಳಗೆ ಹೋದ ಜಾವೆಲಿನ್!

Update: 2016-06-28 23:53 IST

ವಾಷಿಂಗ್ಟನ್, ಜೂ.28: ಅಮೆರಿಕದ ಭರವಸೆಯ ಯುವ ಅಥ್ಲೀಟ್ ಒಬ್ಬ ಜಾವೆಲಿನ್ ಅಬ್ಯಾಸ ಮಾಡುತ್ತಿದ್ದಾಗ ಸಂವಿಸಿದ ದುರಂತದಲ್ಲಿ ಜಾವೆಲಿನ್ ಆತನ ಕಣ್ಣುಗುಳಿಯೊಳಕ್ಕೆ ಹೋದ ಹೃದಯ ವಿದ್ರಾವಕ ಘಟನೆ ನಡೆದಿದೆ.

ಹದಿನೆಂಟು ವರ್ಷದ ಪಾರ್ಕರ್ ಕೆನಡಿ ಎಂಬ ವಿದ್ಯಾರ್ಥಿ ಪೋರ್ಡ್‌ಲೆಂಡ್‌ನ ಹೂಡ್ ರಿವರ್ ವ್ಯಾಲಿ ಹೈಸ್ಕೂಲ್‌ನಲ್ಲಿ ಕಲಿಯುತ್ತಿದ್ದ. ಹಲವು ಶಾಲಾ ಕೂಟಗಳಲ್ಲಿ ಉತ್ತಮ ಸಾಧನೆ ತೋರಿದ್ದ ಈತ, ಇತ್ತೀಚೆಗೆ ನಡೆದ ಒರೆಗಾನ್ 5ಎ ಸ್ಟೇಟ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ತಂಡ ಪೋಲ್‌ವಾಲ್ಟ್ ಹಾಗೂ 100 ಮೀಟರ್ ರಿಲೇಯಲ್ಲಿ ಬಹುಮಾನ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಆದರೆ ಈ ದುರ್ಘಟನೆ ಆತನ ಕ್ರೀಡಾ ಭವಿಷ್ಯದ ಮೇಲೆ ಕರಾಳ ಛಾಯೆ ಬೀರಿದೆ.ೆನಡಿ ಜಾವೆಲಿನ್ ಎಸೆಯಲು ಅಭ್ಯಾಸ ಮಾಡುತ್ತಿದ್ದ. ಸುಮಾರು ಎಂಟು ಅಡಿಯ ಜಾವೆಲಿನ್‌ನ ತುದಿ ಲೋಹದಿಂದ ಮೊನಚಾಗಿರುತ್ತದೆ. ಸಾಮಾನ್ಯವಾಗಿ ಇದನ್ನು ದೂರ ಅಂತರದ ದಾಳಿಯ ಅಸ್ತ್ರವಾಗಿ ಬಳಸಲಾಗುತ್ತದೆ. ಕ್ರೀಡಾಪಟುಗಳು ತಮಗೆ ಎಷ್ಟು ದೂರ ಸಾಧ್ಯವೋ ಅಷ್ಟು ದೂರಕ್ಕೆ ಅದನ್ನು ಎಸೆಯಬೇಕು. ಬೀಳುವಾಗ ಅದರ ತುದಿ ಹುಲ್ಲಿಗೆ ಚುಚ್ಚಿಕೊಳ್ಳಬೇಕು.ೆನಡಿ ಅಭ್ಯಾಸ ಮಾಡು ತ್ತಿದ್ದಾಗ ಒಂದು ಬಾರಿ ಎಸೆದ ಜಾವೆಲಿನ್ ತಲೆ ಕೆಳಗಾಗಿ ಬಿದ್ದು, ಮೊನಚು ತುದಿ ಮೇಲ್ಮುಖವಾಗಿ ನಿಂತಿತು. ಅದನ್ನು ತೆಗೆಯುವ ಸಲುವಾಗಿ ಹುಲ್ಲುಹಾಸಿನತ್ತ ಆತ ಧಾವಿಸಿದ. ಆತ ಅಲ್ಲಿಗೆ ತಲುಪಿದಾಗ ಒಂದು ಭರ್ಚಿ ಸಡಿಲವಾಗಿದ್ದ ಹುಲ್ಲಿನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಅದನ್ನು ತೆಗೆಯಲು ಮುಂದಾದಾಗ, ಅದು ಆತನ ಬಲಗಣ್ಣಿನ ಒಳಕ್ಕೆ ಚುಚ್ಚಿಕೊಂಡಿತು ಎಂದು ಕೋಚ್ ಡೆನ್ನಿ ಹೆರ್ನಯಿಸೆನ್ ವಿವರಿಸಿದರು.ಆದರೆ ಆ ಜಾವೆಲಿನ್ ಸ್ಟಿಕ್ ಓರೆಯಾಗಿ ಚುಚ್ಚಿಕೊಂಡಿದ್ದರಿಂದ ಆತನ ಕಣ್ಣಿಗಷ್ಟೇ ಹಾನಿಯಾಗಿದೆ. ನೇರವಾಗಿ ಚುಚ್ಚಿದ್ದರೆ, ತಲೆ ಒಳಕ್ಕೆ ಹೊಕ್ಕು ಮಾರಣಾಂತಿಕವಾಗುತ್ತಿತ್ತು ಎಂದು ಕೋಚ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News