×
Ad

ಅರುಣ್ ಜೇಟ್ಲಿಗೆ 'ಅನ್ ಇಲೆಕ್ಟೇಬಲ್ ಡಾಗ್' ಎಂದು ಹೇಳಿದರೆ ಸುಬ್ರಮಣ್ಯನ್ ಸ್ವಾಮಿ?

Update: 2016-06-29 15:24 IST

ಹೊಸದಿಲ್ಲಿ, ಜೂ. 29 : ಸುಬ್ರಮಣ್ಯನ್ ಸ್ವಾಮಿ ರಾಜ್ಯಸಭೆಗೆ ಆಯ್ಕೆಯಾದಾಗ ಅವರ ಮೂಲಕ  ಬಿಜೆಪಿ , ಕಾಂಗ್ರೆಸ್ ನ  ನೆಮ್ಮದಿ ಕೆಡಿಸಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು. ಆದರೆ ಈಗಿನ ಪರಿಸ್ಥಿತಿಯನ್ನು ನೋಡಿದರೆ ಸ್ವಾಮಿ ತನ್ನ ಪಕ್ಷದ ಪಾಲಿಗೆ ಬಹುದೊಡ್ಡ ತಲೆನೋವಾಗಿದ್ದಾರೆ. ಸ್ವತಃ ಪ್ರಧಾನಿಯೇ ಅವರ ಬಾಯಿಗೆ ಬೀಗ ಹಾಕಲು ಯತ್ನಿಸಿದ್ದರೂ ಸ್ವಾಮಿ ಮಾತ್ರ ತಮ್ಮ ' ಚುಚ್ಚುವ ಗುಣ' ಬಿಡುವ ಲಕ್ಷಣ ಕಾಣುತ್ತಿಲ್ಲ. ಬದಲಿಗೆ ಅವರು ತಮ್ಮ ಟೀಕೆಯ ಮೊನಚನ್ನು ಇನ್ನಷ್ಟು ಹೆಚ್ಚಿಸಿಕೊಂಡಂತೆ ಕಾಣುತ್ತಿದೆ. 

ಬುಧವಾರ ಸ್ವಾಮಿ ಮಾಡಿರುವ ಟ್ವೀಟ್ ವಿವಾದಕ್ಕೆ ಕಾರಣವಾಗಿದೆ. ಇದರಲ್ಲಿ ಅರ್ನಬ್ ಗೋಸ್ವಾಮಿಯನ್ನು ಗುರಿ ಮಾಡಿ ಅವರಿಗೆ 'ಆನ್ ಇಲೆಕ್ಟೇಬಲ್ ಡಾಗ್' ಮೇಲೆ ಇರುವ ನಿಷ್ಠೆಯನ್ನು ಪ್ರಶ್ನಿಸಿದ್ದಾರೆ. ಈಗ ಎದ್ದಿರುವ ಪ್ರಶ್ನೆ ಈ ' ಆನ್ ಇಲೆಕ್ಟೇಬಲ್ ಡಾಗ್'  ಯಾರು ಎಂಬುದು ? 

ಅರ್ನಬ್ ಕೇಂದ್ರ ಸಚಿವ ಜೇಟ್ಲಿಗೆ ಭಾರೀ ಆಪ್ತ, ಹಾಗೂ ಜೇಟ್ಲಿ ಟೈಮ್ಸ್ ನೌ ಸಂಪಾದಕೀಯ ನಿರ್ಧಾರಗಳಲ್ಲಿ ಪ್ರಭಾವ ಬೀರುತ್ತಾರೆ ಎಂಬುದು ಈಗಾಗಲೇ ಎಲ್ಲೆಡೆ ಇರುವ ಅಭಿಪ್ರಾಯ. ಇನ್ನು ಸ್ವಾಮಿಗೆ ಅರ್ನಬ್ ಹಾಗೂ ಜೇಟ್ಲಿ ಇಬ್ಬರನ್ನೂ ಕಂಡರೆ ಅಷ್ಟಕ್ಕಷ್ಟೇ ಎಂಬುದೂ ಎಲ್ಲರಿಗೂ ಗೊತ್ತಿದೆ. ಜೇಟ್ಲಿ ಈವರೆಗೆ ಯಾವುದೇ ಚುನಾವಣೆ ಗೆದ್ದಿಲ್ಲ. 2014 ರಲ್ಲೂ ಅವರು ಅಮೃತ್ ಸರದಲ್ಲಿ ಅಮರಿಂದರ್ ಸಿಂಗ್ ಎದುರು ಸೋತಿದ್ದರು. ಹಾಗಾಗಿ ಇದು ಜೇಟ್ಲಿಗೇ ಚುಚ್ಚುವ ಸೂಜಿ ಎಂದು ಸಾಮಾಜಿಕ ಜಾಲತಾಣದಲ್ಲಿ ಈಗ ಚರ್ಚೆಯ ವಿಷಯ. 

ರಾಡಿ ಎದ್ದ ಮೇಲೆ ನಿಧಾನವಾಗಿ ಪ್ರತಿಕ್ರಿಯಿಸಿರುವ ಸ್ವಾಮಿ, ' ಆನ್ ಇಲೆಕ್ಟೇಬಲ್ ಡಾಗ್' ಎಂದರೆ ಹಾಗಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News