ವಿದ್ಯುತ್ ಸಮಸ್ಯೆ ; ಕೇಂದ್ರದ ವಿರುದ್ಧ ದಿಲ್ಲಿ ಸರಕಾರ ಸುಪ್ರೀಂಗೆ
Update: 2016-07-01 11:40 IST
ಹೊಸದಿಲ್ಲಿ, ಜು.1: ಕೇಂದ್ರ ಸರಕಾರದ ವಿರುದ್ಧ ಅರವಿಂದ್ ಕೇಜ್ರಿವಾಲ್ ನೇತೃತ್ವದ ದಿಲ್ಲಿ ರಾಜ್ಯ ಸರಕಾರದ ಜಟಾಪಟಿ ಮುಂದುವರಿದಿದ್ದು, ವಿದ್ಯುತ್ ಸಮಸ್ಯೆಗೆ ಸಂಬಂಧಿಸಿ ದಿಲ್ಲಿ ಸರಕಾರ ಇಂದು ಕೇಂದ್ರ ಸರಕಾರದ ವಿರುದ್ಧ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದೆ.
ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಡೆಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.