×
Ad

ಸ್ವಾತಿ ಕೊಲೆ ಮಾಡಿದ್ದು ಮುಸ್ಲಿಂ ಎಂದು ಸುಳ್ಳು ಹರಡಿದವನ ಮೇಲೆ ಯಾವುದೇ ಕ್ರಮವಿಲ್ಲ ?

Update: 2016-07-02 16:45 IST

ಚೆನ್ನೈ , ಜೂ. 2:  ಚೆನ್ನೈ ರೈಲ್ವೆ ನಿಲ್ದಾಣದಲ್ಲಿ ಟೆಕ್ಕಿ ಸ್ವಾತಿಯನ್ನು ಬರ್ಬರವಾಗಿ ಕೊಂದು ಹಾಕಿದ ರಾಮ್ ಕುಮಾರ್ ಎಂಬವನ  ಬಂಧನವಾಗಿದೆ. ಆದರೆ ಆ ಕೊಲೆ ನಡೆದ ಕೂಡಲೇ " ಹಿಂದೂ ಯುವತಿಯನ್ನು ಮುಸ್ಲಿಂ ಒಬ್ಬ ಬರ್ಬರವಾಗಿ ಐಸಿಸ್ ಮಾದರಿಯಲ್ಲಿ ಕೊಂದಿದ್ದಾನೆ " ಎಂದು ಹಸಿ ಹಸಿ ಸುಳ್ಳನ್ನು ಟ್ವಿಟ್ಟರ್ ನಲ್ಲಿ ಹರಡಿ ಕೋಮು ದ್ವೇಷ ಹಬ್ಬಲು ವಿಫಲ ಪ್ರಯತ್ನ ನಡೆಸಿದ ರಾಮ್ಕಿ  (Ramki) ಎಂಬ ಟ್ವಿಟ್ಟರ್ ಬಳಕೆದಾರನನ್ನು ಮಾತ್ರ ಈವರೆಗೂ ಪೊಲೀಸರು ಬಂಧಿಸಿಲ್ಲ. 

ವಿಪರ್ಯಾಸವೆಂದರೆ , ಈ ರಾಮ್ಕಿಯನ್ನು ಟ್ವಿಟ್ಟರ್ ನಲ್ಲಿ ಖುದ್ದು ಪ್ರಧಾನಿ ಮೋದಿಯವರು ಫಾಲೋ ಮಾಡುತ್ತಾರೆ. ಮಾತ್ರವಲ್ಲ ಈತ ಆಗಾಗ ವಿ ಕೆ ಸಿಂಗ್ ಸಹಿತ ಕೇಂದ್ರ ಸಚಿವರುಗಳ ಜೊತೆ ನಿಂತ ಫೋಟೋಗಳನ್ನು ಹಾಕುತ್ತಿರುತ್ತಾನೆ. “XLRI Alumni, BJP Karyakarta, Social Entrepreneur, Swayamsevak from Chennai.” ಎಂದು ಟ್ವಿಟ್ಟರ್ ಪ್ರೊಫೈಲ್ ಇರುವ ಈತ ಯಾವುದೇ ಪುರಾವೆಯಿಲ್ಲದೆ ಕೇವಲ ಕೋಮು ಹಿಂಸೆ ಸೃಷ್ಟಿಸುವ ಉದ್ದೇಶದಿಂದ ಹಸಿ ಸುಳ್ಳನ್ನು ಟ್ವಿಟ್ಟರ್ ನಲ್ಲಿ ಹರಿ ಬಿಟ್ಟಿದ್ದ. ವಿಶೇಷವೆಂದರೆ ಸ್ವಾತಿ ಕೊಲೆ ಆರೋಪಿ ರಾಮ್ ಕುಮಾರ್ ಬಂಧನ ಆದ ಮೇಲೂ ಈ ರಾಮ್ಕಿ ತನ್ನ ಸುಳ್ಳು ಟ್ವಿಟ್ ಡಿಲೀಟ್ ಮಾಡಿಲ್ಲ. 

ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ,  ಕಾಂಗ್ರೆಸ್ ವಕ್ತಾರ ಸಂಜಯ್ ಝಾ ಸಹಿತ ಹಲವಾರು ಈ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.  ಆತನನ್ನು ಟ್ವಿಟ್ಟರ್ ನಲ್ಲಿ ಪ್ರಧಾನಿ ಸಹಿತ ಹಲವು ಪ್ರಭಾವಿಗಳು ಫಾಲೋ ಮಾಡುತ್ತಿರುವುದರಿಂದ ಚೆನ್ನೈ ಪೊಲೀಸರು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರು , ರಾಜಕಾರಣಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News