×
Ad

ಬಗ್ದಾದ್‌ ಮೇಲೆ ಐಸಿಸ್ ದಾಳಿ; 82 ಸಾವು

Update: 2016-07-03 13:54 IST

ಬಗ್ದಾದ್‌, ಜು.3: ಇರಾಕ್‌ನ ರಾಜಧಾನಿ ಬಗ್ದಾದ್‌ ಮೇಲೆ ಐಸಿಸ್‌ ಬಾಂಬ್‌ ದಾಳಿಯ ಪರಿಣಾಮವಾಗಿ 82 ಮಂದಿ ಮೃತಪಟ್ಟು  , ಇನ್ನೂರಕ್ಕೂ ಅಧಿಕ  ಮಂದಿ ಗಾಯಗೊಂಡ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ.
ಕರ‍್ರಾಡ ಜಿಲ್ಲೆಯ ರೆಸ್ಟೊರೆಂಟ್‌ ಮತ್ತು ಅಂಗಡಿ ಸಮುಚ್ಛಯದ ಪ್ರದೇಶದಲ್ಲಿ  ಆತ್ಮಾಹುತಿ ಬಾಂಬ್‌ ದಾಳಿ ಸಂಭವಿಸಿದೆ. ಇದರಿಂದಾಗಿ ನಾಲ್ಕು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಬಗ್ದಾದ್ ಮೇಲೆ ಈ ಹಿಂದೆ ನಡೆದಿರುವ ಇಸ್ಲಾಮಿಕ್ ಸ್ಟೇಟ್ ದಾಳಿಯ ವಿವರ

*ಜೂನ್ 9,2016:  ಎರಡು ಬಾಂಬ್ ದಾಳಿ 30 ಸಾವು.

*ಮೇ 17, 2016: ಶಿಯಾ ಪ್ರಾಬಲ್ಯದ ಪ್ರದೇಶವನ್ನು ಗುರಿಯಾಗಿರಿಸಿ ನಾಲ್ಕು ಬಾಂಬ್ ದಾಳಿ ಪರಿಣಾಮವಾಗಿ 69 ಸಾವು.

*ಮೇ 11, 2016: ಕಾರ್ ಬಾಂಬ್ ದಾಳಿ 93 ಸಾವು. ಈ ಪೈಕಿ  ಶಿಯಾ ಜಿಲ್ಲೆಯಲ್ಲಿ 64 ಸಾವು.

*ಮೇ 01, 2016: ಸಮಾವದಲ್ಲಿ ಎರಡು ಬಾಂಬ್ ಸ್ಫೋಟ ; 33 ಸಾವು.

*ಮಾ. 26, 2016:ಇಸ್ಕಾಂದ್ರಿಯಾ ನಗರದ ಸೆಂಟ್ರಲ್ ನಗರದಲ್ಲಿ ಫುಟ್ಬಾಲ್ ಪಂದ್ಯವನ್ನು ಗುರಿಯಾಗಿರಿಸಿ ದಾಳಿ 32 ಸಾವು.

*ಮಾ. 06, 2016: ಹಿಲ್ಲಾದಲ್ಲಿ ಎರಡು  ಬಾಂಬ್ ದಾಳಿ 47 ಸಾವು.

*ಫೆ.28, 2016: ಸದರ್ ನಗರದಲ್ಲಿ ಅವಳಿ ಬಾಂಬ್ ಸ್ಫೋಟ 70 ಸಾವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News