×
Ad

ಅಕ್ಷರಧಾಮ ಪ್ರಕರಣ: ಖುಲಾಸೆಗೊಂಡವರಿಗೆ ನಷ್ಟಪರಿಹಾರವನ್ನು ವಿರೋಧಿಸಿದ ಗುಜರಾತ್ ಸರಕಾರ!

Update: 2016-07-04 11:34 IST

ಹೊಸದಿಲ್ಲಿ, ಜುಲೈ, 4: 2002ರಲ್ಲಿ ಅಕ್ಷರಧಾಮ ಭಯೋತ್ಪಾದಕ ದಾಳಿಯಲ್ಲಿ ಸುಪ್ರೀಂ ಕೋರ್ಟ್ ನಿಂದ ಆರೋಪಮುಕ್ತಗೊಂಡವರು ನಷ್ಟಪರಿಹಾರ ಕೇಳಿ ಸಲ್ಲಿಸಿದ ಅರ್ಜಿಯನ್ನು ಗುಜರಾತ್ ಸರಕಾರವಿರೋಧಿಸಿದೆ. ತನಿಖೆ ಸಂಸ್ಥೆಗಳು ಅಕ್ರಮವಾಗಿ ಬಂಧಿಸಿದ್ದಾರೆಂದು ಬೆಟ್ಟು ಮಾಡಿ ಆರೋಪ ಮುಕ್ತರಾದ ಆರು ಮಂದಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಮೂವತ್ತೆರಡು ಮಂದಿ ಸಾವನ್ನಪ್ಪಿದ ಪ್ರಕರಣದಲ್ಲಿ ವಿಚಾರಣಾ ಕೋರ್ಟ್ ಮತ್ತು ಗುಜರಾತ್ ಹೈಕೋರ್ಟ್ ಇವರನ್ನು ಶಿಕ್ಷಿಸಿತ್ತು. ಆದ್ದರಿಂದ ವ್ಯಕ್ತಿಸ್ವಾತಂತ್ರ್ಯದ ಕುರಿತು ಆರೋಪಮುಕ್ತರಾದವರ ವಾದಗಳನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದು ಗುಜರಾತ್ ಸರಕಾರ ಅಫಿದಾವಿತ್ ಸಲ್ಲಿಸಿದೆ.

  ಇವರಿಗೆ ನಷ್ಟಪರಿಹಾರ ನೀಡಿದರೆ ತನಿಖಾ ಸಂಸ್ಥೆಗಳ ವಿಶ್ವಾಸಾರ್ಹತೆ ಕುರಿತು ಸಾರ್ವಜನಿಕರಲ್ಲಿ ಗಂಭೀರವಾದ ಸಂದೇಹಗಳನ್ನು ಸೃಷ್ಟಿಸಲಿದೆ. ಎಂದು ಅಫಿದಾವಿತ್‌ನಲ್ಲಿ ವಿವರಿಸಲಾಗಿದೆ. ಪ್ರಕರಣದಲ್ಲಿ ಇವರ ಪಾತ್ರವನ್ನು ಸಂದೇಹಾತೀತವಾಗಿ ಪ್ರಾಸಿಕ್ಯೂಶನ್‌ಗೆ ಸಾಬೀತು ಪಡಿಸಲು ಸಾಧ್ಯವಾಗದ್ದರಿಂದ 2014 ಮೇ ಹದಿನಾರಕ್ಕೆ ಸುಪ್ರೀಂಕೋರ್ಟ್ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ವಿಚಾರಣಾ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದ್ದ ಆದಂ ಅಜ್ಮೀರಿ, ಶಾನ್ ಮಿಯಾ, ಮುಫ್ತಿ ಅಬ್ದುಲ್ ಖಯ್ಯೂಂ ಮನ್ಸೂರಿ ಮುಂತಾದವರಿಗೆ ಸುಪ್ರೀಂಕೋರ್ಟ್ ಬಿಡುಗಡೆಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News