ಐಸ್ ಕ್ರೀಂನೊಳಗೆ ಹಾವಿನ ಮರಿ !
ಚಂಡಿಗಡ,ಜುಲೈ 4: ಒಂದು ವೇಳೆ ಐಸ್ ಕ್ರೀಂ ತಿನ್ನುವ ಅಭ್ಯಾಸ ಇರುವವರಾದರೆ ಎಚ್ಚರ. ಈ ದಂಪತಿಗೆ ಆದಂತೆ ನಿಮಗೂ ಅನುಭವವಾಗುವ ಸಾಧ್ಯತೆಯಿದೆ. ಚಂಡಿಗಡದ ರಾಜೀವ್ ಸೆಹಗಲ್ ಎಂಬವರು ದುಬಾರಿ ಐಸ್ ಕ್ರೀಂನ್ನು ಖರೀದಿಸಿ ತನ್ನ ಮನೆಗೆ ತಂದಿದ್ದರು. ಪತ್ನಿ ಕುಮ್‌ಕುಮ್‌ರ ಜೊತೆಗೂಡಿ ತಿನ್ನುತ್ತಿದ್ದರು. ಅದರಲ್ಲಿ ಹಾವಿನ ಮರಿ ಕಂಡುಬಂದಿತ್ತು. ಕೆಲವೇ ಸಮಯದಲ್ಲಿ ಅವರಿಬ್ಬರೂ ವಾಂತಿ ಮಾಡಿದ್ದರಿಂದ ಇಬ್ಬರನ್ನೂ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಯಿತು.
ಶನಿವಾರ ತನ್ನ ಮನೆಯ ಪಕ್ಕದ ಅಂಗಡಿಯೊಂದರಿಂದ ಐಸ್‌ಕ್ರೀಮ್‌ನ್ನು ಖರೀದಿಸಿ ಮನೆಗೆ ತಂದಿದ್ದರು. ಪ್ರತಿಷ್ಠಿತ ಕಂಪೆನಿಯೊಂದರ ದುಬಾರಿ ಐಸ್‌ಕ್ರೀಮ್ ಆಗಿತ್ತು. ಐಸ್‌ಕ್ರೀಮ್‌ನೊಳಗೆ ಕಂಡುಬಂದ ಹಾವಿನ ಮರಿಯನ್ನು ಹೊರತೆಗೆದ ರಾಜೀವರು ಬಾಟ್ಲಿಗೆ ಹಾಕಿ ಮುಚ್ಚಿದ್ದಾರೆ. ಅದು ಮಳೆಗಾಲದ ಯಾವುದೋ ಹುಳ ಇರಬಹುದು ಎಂದು ಮೊದಲು ಅವರು ಭಾವಿಸಿದ್ದರು. ರಾಜೀವ್ ಐಸ್‌ಕ್ರೀಂ ಕಂಪೆನಿಯ ವಿರುದ್ಧ ದೂರು ನೀಡಿದ್ದಾರೆ ಪೊಲೀಸರು ದೂರು ದಾಖಲಿಸಿ ಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.