ಇಸ್ಲಾಮ್ ಸ್ವೀಕರಿಸಿದ ಜರ್ಮನಿಯ ಯುದ್ಧ ವರದಿಗಾರ ಮಾರ್ಟಿನ್ ಲಿಜಿನ್
Update: 2016-07-08 19:24 IST
ಬರ್ಲಿನ್ , ಜು. 9 : ಜರ್ಮನಿಯ ಹಿರಿಯ ಪತ್ರಕರ್ತ, ಯುದ್ಧ ವರದಿಗಾರ ಮಾರ್ಟಿನ್ ಲಿಜಿನ್ ಈದುಲ್ ಫಿತ್ರ್ ನ ದಿನದಂದೇ ಇಲ್ಲಿನ ಅರೆಸಲಾ ಮಸೀದಿಯಲ್ಲಿ ನಡೆದ ಈದ್ ನಮಾಜ್ಹ್ ನ ಬಳಿಕ ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದ್ದಾರೆ.
1980 ರಲ್ಲಿ ಜನಿಸಿದ ಮಾರ್ಟಿನ್ ಸಿರಿಯಾ ಆಂತರಿಕ ಕಲಹ ಹಾಗೂ 2014 ರಲ್ಲಿ ಗಾಝಾ ಮೇಲೆ ನಡೆದ ಭೀಕರ ಇಸ್ರೇಲ್ ದಾಳಿಯನ್ನು ಅತ್ಯಂತ ವಿವರವಾಗಿ ವರದಿ ಮಾಡಿದವರು. ಇಸ್ರೇಲ್ ನೀತಿಗಳ ತೀವ್ರ ಟೀಕಾಕಾರನೆಂದು ಅವರನ್ನು ಗುರುತಿಸಲಾಗುತ್ತದೆ.