×
Ad

ನಾನು ಗುಜರಾತ್‌ನಲ್ಲಿದ್ದಿದ್ದರೆ ನನ್ನನ್ನೂ ಎನ್‌ಕೌಂಟರ್‌ನಲ್ಲಿ ಮುಗಿಸುತ್ತಿದ್ದರು !: ಅರವಿಂದ್ ಕೇಜ್ರಿವಾಲ್

Update: 2016-07-10 12:45 IST

 ಹೊಸದಿಲ್ಲಿ, ಜುಲೈ 10: ಒಂದುವೇಳೆ ನಾನು ಗುಜರಾತ್‌ನಲ್ಲಿರುತ್ತಿದ್ದರೆ ನನ್ನನ್ನೂ ಎನ್‌ಕೌಂಟರ್‌ನಲ್ಲಿ ಕೊಂದುಬಿಡುತ್ತಿದ್ದರು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಇಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ನಡೆದ ಈದ್ ಮಿಲನ್ ಸಮಾರಂಭದಲ್ಲಿ ಹೇಳಿದ್ದಾರೆಂದು ವರದಿಯಾಗಿದೆ. ಈ ಸಮಾರಂಭದಲ್ಲಿ ಕೇಜ್ರಿವಾಲ್‌ರ ಉಡುಪು ನೋಡಿ ಜನರು ಚಕಿತಗೊಂಡಿದ್ದರು. ಮೊದಲು ಅವರು ಕಿರೀಟವನ್ನು ಧರಿಸಿದ್ದರು ನಂತರ ಅದನ್ನು ಕೆಳಗಿಟ್ಟು ಟೋಪಿ ಧರಿಸಿದ್ದಾರೆ.ನಂತರ ಅವರ ಮಾತುಗಳು ಕೂಡಾ ಜನರನ್ನು ಚಕಿತಗೊಳಿಸುವಂತಿತ್ತು. ಈದ್‌ಮಿಲನ್ ಸಮಾರಂಭವನ್ನು ಅವರು ರಾಜಕೀಯ ಸಭೆಯಾಗಿ ಪರಿವರ್ತಿಸಿದ್ದಾರೆನ್ನಲಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಮಾತಿನದಾಳಿಗಿಳಿದ ಅವರು"ಅಲ್ಲಾಮತ್ತು ದೇವರು ನಮ್ಮೊಂದಿಗಿದ್ದರು. ಆದ್ದರಿಂದ ನಾವು 67 ವಿಧಾನಸಭಾ ಸ್ಥಾನಗಳಲ್ಲಿ ವಿಜಯಿಯಾದೆವು. ಆದರೆ ಗೂಂಡಾಗಳು ನಮ್ಮ ಹಿಂದೆ ಬಿದ್ದಿದ್ದಾರೆ" ಎಂದು ಟೀಕಿಸಿದ್ದಾರೆ. ಒಂದು ವೇಳೆ ನಾನು ಗುಜರಾತ್‌ನಲ್ಲಿದ್ದಿದ್ದರೆ ನನ್ನನ್ನು ಎನ್‌ಕೌಂಟರ್‌ನಲ್ಲಿ ಮುಗಿಸುತ್ತಿದ್ದರು. "ಬಿಜೆಪಿ ಪಂಜಾಬ್ ಮತ್ತು ಗೋವಾದಲ್ಲಿ ನಮ್ಮ ಪ್ರಗತಿಯನ್ನು ಕಂಡು ಅಸೂಯೆ ಪಡುತ್ತಿದೆ" ಎಂದು ಕೇಜ್ರಿವಾಲ್ ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News