×
Ad

ಖಾದ್ಯತೈಲ: ಹೆಚ್ಚುತ್ತಿದೆ ಬೇಡಿಕೆ, ಕುಸಿಯುತ್ತಿದೆ ಪೂರೈಕೆ

Update: 2016-07-12 23:07 IST

ಗ್ರಾಮೀಣ ಭಾಗದಲ್ಲಿ ಕೂಡಾ ಖಾದ್ಯತೈಲದ ಬಳಕೆ ಹೆಚ್ಚುತ್ತಿದೆ. ಇದನ್ನು ಅಡುಗೆಯ ಮಾಧ್ಯಮವಾಗಿ ಬಳಸುವ ಪ್ರವೃತ್ತಿ ಹೆಚ್ಚುತ್ತಿದೆ. ಆದರೆ ಎಣ್ಣೆಬೀಜಗಳ ಉತ್ಪಾದನೆ ಮಾತ್ರ ಕುಸಿಯುತ್ತಿದೆ. 2015ರಲ್ಲಿ ಕೊನೆಗೊಂಡ ದಶಕದಲ್ಲಿ ಭಾರತದ ಖಾದ್ಯ ತೈಲ ಆಮದು ದ್ವಿಗುಣಗೊಂಡಿದೆ ಎಂದು ಕೇಂದ್ರ ಸರಕಾರದ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯದ ಅಂಕಿ ಅಂಶಗಳು ಹೇಳುತ್ತವೆ,
ಗ್ರಾಮೀಣ ಪ್ರದೇಶಗಳಲ್ಲಿ ಖಾದ್ಯ ತೈಲ ಬಳಕೆ ಪ್ರಮಾಣ ಶೇ.40ರಷ್ಟು ಹೆಚ್ಚಿದೆ. ನಗರ ಪ್ರದೇಶದಲ್ಲಿ 2004 ರಿಂದ 2012ರ ಅವಧಿಯಲ್ಲಿ ಬೇಡಿಕೆ ಶೇ.29ರಷ್ಟು ಹೆಚ್ಚಿದೆ. ಆದರೆ ಎಣ್ಣೆಕಾಳು ಉತ್ಪಾದನೆ ಪ್ರಮಾಣ 2005ರಿಂದ 2012ರ ಅವಧಿಯಲ್ಲಿ ಶೇ.7ರಷ್ಟು ಕುಂಠಿತಗೊಂಡಿದೆ ಎಂದು 2015ರಲ್ಲಿ ಬಿಡುಗಡೆಯಾದ ಕೇಂದ್ರ ಸರಕಾರದ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯದ ಅಂಕಿ ಅಂಶಗಳು ಹೇಳುತ್ತವೆ.
ಆದರೆ ಭಾರತದಲ್ಲಿ ಖಾದ್ಯ ತೈಲಗಳ ಬಳಕೆ ಬೆಲೆ ಹಾಗೂ ಲಭ್ಯತೆಗೆ ಅನುಗುಣವಾಗಿ ಬದಲಾಗುತ್ತದೆ. ಆದರೆ ಬೇಡಿಕೆ ಮಾತ್ರ ಎಂದೂ ಕುಸಿದಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಸಂಪತ್ತು.
‘‘ಈ ಪ್ರಗತಿಗೆ ಎಣ್ಣೆಬೀಜ ಉತ್ಪಾದನೆ ಕುರಿತ ಸರಕಾರದ ನೀತಿಗಳು ಕೂಡಾ ಕಾರಣ. ಇದರ ಜತೆಗೆ ದೇಶೀಯ ಸಂಸ್ಕರಣೆ ಹಾಗೂ ಆಮದು ಕೂಡಾ ಇದಕ್ಕೆ ಕಾರಣವಾಗುತ್ತದೆ. ಈ ಎಲ್ಲ ಅಂಶಗಳು ಖಾದ್ಯ ತೈಲ ಬೆಲೆಯ ವ್ಯತ್ಯಯಕ್ಕೆ ಹಾಗೂ ಬೇಡಿಕೆಗೆ ಕಾರಣವಾಗುತ್ತವೆ’’ ಎಂದು ಐಸಿಆರ್‌ಎ ತನ್ನ ವರದಿಯಲ್ಲಿ ಹೇಳಿದೆ.
‘‘1971ರಲ್ಲಿ 541 ದಶಲಕ್ಷ ಇದ್ದ ಭಾರತದ ಜನಸಂಖ್ಯೆ 2001ರ ವೇಳೆಗೆ 1.02 ಶತಕೋಟಿಗೆ ಹೆಚ್ಚಿದ್ದು, ಪ್ರಸ್ತುತ 1.28 ಶತಕೋಟಿ ತಲುಪಿದೆ. ಕಳೆದ ಮೂರು ದಶಕಗಳಿಂದ ನಿರಂತರವಾಗಿ ತಲಾದಾಯ ಹೆಚ್ಚುತ್ತಿದೆ ಹಾಗೂ ಬಳಕೆ ಪ್ರಮಾಣ ಕೂಡಾ ಯಾವ ಅಡೆತಡೆಯೂ ಇಲ್ಲದೇ ಹೆಚ್ಚುತ್ತಿದೆ ಎಂದು ವರದಿ ವಿವರಿಸುತ್ತದೆ. ಬಳಕೆ ಪ್ರಮಾಣ ಇತ್ತೀಚೆಗಿನ ವರ್ಷಗಳಲ್ಲಿ ವ್ಯತ್ಯಯವಾಗಿದ್ದು, ಇದಕ್ಕೆ ಮುಖ್ಯ ಕಾರಣ. ಉತ್ಪನ್ನದ ಬೆಲೆ ಹೆಚ್ಚಳ ಇದಕ್ಕೆ ಕಾರಣ
ಕೇಂದ್ರ ಸರಕಾರದ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯದ ಅಂಕಿ ಅಂಶಗಳು ಹೇಳುವಂತೆ, ದೇಶೀಯವಾಗಿ ಬೆಳೆದ ಎಣ್ಣೆಬೀಜಗಳಿಂದ ಉತ್ಪಾದನೆಯಾಗುವ ಖಾದ್ಯತೈಲ ಕುಸಿಯುತ್ತಿದೆ. 2015ರಲ್ಲಿ ಅಂತ್ಯಗೊಂಡ ದಶಕದಲ್ಲಿ ಎಣ್ಣೆಬೀಜಗಳ ಉತ್ಪಾದನೆ ಹತ್ತು ಲಕ್ಷ ಟನ್‌ನಷ್ಟು ಕುಸಿದಿದೆ. ಈ ಕುಸಿತಕ್ಕೆ ಹಲವು ಕಾರಣಗಳಿವೆ.
ಮೊದಲನೆಯದಾಗಿ ಅಕಾಲಿಕ ಮಳೆ. ಸರಕಾರದ ಪ್ರಕಾರ, ಅಕಾಲಿಕ ಮಳೆಯ ಕಾರಣದಿಂದ ರೈತರು ಎಣ್ಣೆಬೀಜಗಳನ್ನು ಬೆಳೆಯುವ ಆಸಕ್ತಿ ಕಳೆದುಕೊಂಡಿದ್ದಾರೆ. ವೆಚ್ಚದಷ್ಟು ಕೂಡಾ ಪ್ರತಿಫಲ ಸಿಗುವ ವಾತಾವರಣ ಇಲ್ಲ.
ಎಣ್ಣೆಕಾಳುಗಳನ್ನು ಬೆಳೆಯುವ ರೈತರು ತಮ್ಮ ಬೆಳೆಯನ್ನು ಅಕ್ಕಿ ಅಥವಾ ಗೋಧಿಗೆ ಬದಲಾಯಿಸಿಕೊಂಡಿದ್ದಾರೆ ಎನ್ನುವ ಅಂಶವನ್ನು 2014ರ ನವೆಂಬರ್‌ನಲ್ಲಿ ಬಿಡುಗಡೆಯಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಅಹ್ಮದಾಬಾದ್‌ನ ಅಧ್ಯಯನ ವರದಿ ಹೇಳುತ್ತದೆ.

ಬೇಡಿಕೆ ಹೆಚ್ಚಳ
ಸರಕಾರ ಖಾದ್ಯತೈಲಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸುವ ಮೂಲಕ ದೇಶೀಯ ಉದ್ಯಮವನ್ನು ಸಂರಕ್ಷಿಸುವ ಪ್ರಯತ್ನ ಮಾಡುತ್ತಲೇ ಇದೆ. 2015ರ ಸೆಷ್ಟ್ಟಂಬರ್‌ನಲ್ಲಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಮಾಡಿದ ವರದಿಯ ಪ್ರಕಾರ, 2014-15ರಲ್ಲಿ ಕಚ್ಚಾ ತೈಲದ ಮೇಲಿನ ತೆರಿಗೆಯನ್ನು ಶೇ.7.5ರಿಂದ 12.5ಕ್ಕೆ ಹೆಚ್ಚಿಸಿದ್ದರೆ, ಶುದ್ಧ ಎಣ್ಣೆಯ ಮೇಲಿನ ಆಮದು ಸುಂಕವನ್ನು ಶೇ.15 ರಿಂದ 20ಕ್ಕೆ ಏರಿಸಿದೆ.
ಇದೀಗ ಭಾರತದ ಖಾದ್ಯ ತೈಲ ಆಮದು ಪ್ರಮಾಣ ಶೇ.66ರಷ್ಟಿದ್ದು, ಇದು ಕಡಿಮೆಯಾಗುವ ಸಾಧ್ಯತೆ ಇಲ್ಲ. ಜನಸಂಖ್ಯಾ ಸ್ಫೋಟ ಹಾಗೂ ಆದಾಯದಲ್ಲಿ ಆಗುತ್ತಿರುವ ಹೆಚ್ಚಳದಿಂದಾಗಿ ಗ್ರಾಹಕರು, ಆಮದಿನ ಮೇಲೆ ವಿಧಿಸಿದ ಹೆಚ್ಚುವರಿ ಸುಂಕವನ್ನು ಪಾವತಿಸಲು ಸಿದ್ಧರಾಗಿದ್ದಾರೆ.

Writer - ಸುಕನ್ಯಾ ಭಟ್ಟಾಚಾರ್ಯ

contributor

Editor - ಸುಕನ್ಯಾ ಭಟ್ಟಾಚಾರ್ಯ

contributor

Similar News