ದಲಿತ ಚಳವಳಿಯನ್ನು ಹೈಜಾಕ್ ಮಾಡಿಕೊಂಡರೇ ಕನ್ಹಯ್ಯ, ಸಿಪಿಎಂ ?

Update: 2016-07-13 07:23 GMT

ಹೈದರಾಬಾದ್,ಜು.13 : ತನಗೆ ಜಾಮೀನು ದೊರೆತ ನಂತರ ಜೆಎನ್‌ಯು ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್ ಮಾರ್ಚ್ 3 ರಂದು ನೀಡಿದಭಾಷಣದಲ್ಲಿ ಅಂಬೇಡ್ಕರ್ ಹಾಗೂ ರೋಹಿತ್ ವೇಮುಲಾರನ್ನು ಹೊಗಳಿ ಘೋಷಣೆಗಳನ್ನು ಕೂಗಿದಾಗ ಆತ ಹಾಗೂ ಜೆಎನ್‌ಯುವಿನ ಹಲವು ಎಡಪಂಥೀಯ ನಾಯಕರುಗಳು ದಲಿತ ಚಳವಳಿಯನ್ನು ಹೈಜಾಕ್ ಮಾಡಬಹುದೆಂದುದಲಿತ ಬುದ್ಧಿಜೀವಿಗಳು ಅಂದುಕೊಂಡಿದ್ದರು. ತಮ್ಮ ಅಭಿಪ್ರಾಯ ನಿಜವೆಂದು ಅವರಿಗೆ ಈಗ ಅರ್ಥವಾಗುತ್ತಿದೆ. ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ಸುಗಳಲ್ಲಿ ತಾರತಮ್ಯ ನೀತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ರೋಹಿತ್ ವೇಮುಲಾ ಕಾಯ್ದೆಯ ಕರಡು ರಚಿಸಲು ಸಮಿತಿಯೊಂದನ್ನು ರಚಿಸುವ ಸಲುವಾಗಿ ಜುಲೈ 15 ಹಾಗೂ 16 ರಂದುಜೆಎನ್‌ಯು ವಿದ್ಯಾರ್ಥಿ ಯೂನಿಯನ್ ರಾಷ್ಟ್ರೀಯ ವಿದ್ಯಾರ್ಥಿಗಳಸಮ್ಮೇಳನವನ್ನು ಆಯೋಜಿಸಲು ನಿರ್ಧರಿಸಿದೆಯಾದರೂಆಯೋಜಕರು ಹೈದರಾಬಾದ್ ನ ಅಂಬೇಡ್ಕರ್ ವಿದ್ಯಾರ್ಥಿ ಸಂಘದಲ್ಲಿರುವ ರೋಹಿತ್ ವೇಮುಲಾಸಹವರ್ತಿಗಳಿಗಾಗಲೀಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ದಲಿತ ವಿದ್ಯಾರ್ಥಿ ನಾಯಕರನ್ನಾಗಲೀ ಆಹ್ವಾನಿಸಿಲ್ಲ ಯಾ ಅವರಿಗೆ ಈ ಬಗ್ಗೆ ಮಾಹಿತಿ ನೀಡಿಲ್ಲ. ಹೈದರಾಬಾದ್ ಕೇಂದ್ರ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಯೂನಿಯನ್ ಗೂ ಮಾಹಿತಿ ಹೋಗಿಲ್ಲ.

ಅವರಿಗೆಲ್ಲಾ ಈ ಸಮಾವೇಶಕ್ಕೆ ಆಹ್ವಾನ ನೀಡದೇ ಇರುವ ಮೂಲಕ ಈ ಹೊಸ ಕಾಯ್ದೆ ರಚಿಸಬೇಕೆಂಬ ಬೇಡಿಕೆಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ರೋಹಿತ್ ವೇಮುಲಾ ಆತ್ಮಹತ್ಯೆ ಘಟನೆ ನಡೆದ ಬಳಿಕ ಹುಟ್ಟಿಕೊಂಡಿತೆಂಬ ವಾಸ್ತವತೆಯನ್ನು ನಿರ್ಲಕ್ಷ್ಯಿಸಲು ನಿರ್ಧರಿಸಿರುವುದು ಸ್ಪಷ್ಟವಾಗಿದೆ.

ಇಂತಹ ಒಂದು ಧೋರಣೆಯಿಂದ ನನ್ನ ಸಹೋದರನ ಸಾವಿಗೆ ಕಾರಣರಾದ ಜನರಿಗೆ ಸಹಾಯ ಮಾಡಿದಂತಾಗುವುದು, ಎಂದು ರೋಹಿತ್ ಅವರ ಸಹೋದರ ರಾಜಾ ವೇಮುಲಾ ಹೇಳಿದ್ದಾರೆ.

ಹೈದರಾಬಾದ್ ಕೇಂದ್ರ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಯೂನಿಯನನ್ನು ಈ ಸಭೆಯಿಂದ ಹೊರಗಿಟ್ಟಿರುವುದು ಉದ್ದೇಶಪೂರ್ವಕ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

‘‘ ಪ್ರತಿನಿಧಿಗಳ ತಂಗುವಿಕೆಗೆ ವ್ಯವಸ್ಥೆ ಮಾಡಲು ಹಣಕಾಸಿನ ಕೊರತೆಯಿಂದಾಗಿ ವಿವಿಧ ಸಂಘಟನೆಗಳು ಹಾಗೂ ವಿದ್ಯಾರ್ಥಿ ಯೂನಿಯನ್ ಗಳಿಗೆ ಆಹ್ವಾನ ಪತ್ರಿಕೆ ಕಳುಹಿಸುವಲ್ಲಿವಿಳಂಬವಾಗಿದೆ,’’ ಎಂದು ಜೆಎನ್‌ಯು ವಿದ್ಯಾರ್ಥಿ ಯೂನಿಯನ್ ಪ್ರಧಾನ ಕಾರ್ಯದರ್ಶಿ ರಾಮ ನಾಗ ಹೇಳಿದ್ದಾರೆ. ಯಾರನ್ನೂ ಈ ಸಮಾವೇಶದಿಂದ ಹೊರಗಿಡುವುದು ನಮಗೆ ಬೇಕಿಲ್ಲ, ಎಂದೂ ಅವರು ಸ್ಪಷ್ಟ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News