×
Ad

ಕೇಜ್ರಿವಾಲ್ ಸಚಿವನ ಆರ್ಕಿಟೆಕ್ಟ್ ಪುತ್ರಿಗೆ ಮೊಹಲ್ಲಾ ಆಸ್ಪತ್ರೆಗಳ ಉಸ್ತುವಾರಿ!

Update: 2016-07-13 23:33 IST


 

ಹೊಸದಿಲ್ಲಿ,ಜು.13: ಸೌಮ್ಯಾ ಜೈನ್(26)ಗೆ ಜನಾರೋಗ್ಯ ಕ್ಷೇತ್ರದಲ್ಲಿ ಯಾವುದೇ ಅನುಭವವಿಲ್ಲ. ಆಕೆ ಓದಿದ್ದು ವಾಸ್ತುಶಿಲ್ಪ ಶಾಸ್ತ್ರ. ಆದರೂ ಆಕೆ ದಿಲ್ಲಿ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ,ರೋಗಿಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆಯನ್ನು ನೀಡುವ, ಮೊಹಲ್ಲಾ ಅಥವಾ ವಸತಿ ಬಡಾವಣೆಗಳಲ್ಲಿರುವ ಸುಮಾರು 100ರಷ್ಟು ಆಸ್ಪತ್ರೆಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಅಂದ ಹಾಗೆ ಆಕೆ ಅರವಿಂದ ಕೇಜ್ರಿವಾಲ್ ಸರಕಾರದಲ್ಲಿ ಆರೋಗ್ಯ ಸಚಿವರಾಗಿರುವ ಸತ್ಯೇಂದ್ರ ಜೈನ್ ಅವರ ಪುತ್ರಿ!
ಭಾರೀ ಜನಪ್ರಿಯವಾಗಿರುವ,ಅಂತಾರಾಷ್ಟ್ರೀಯ ಗಮನವನ್ನೂ ಸೆಳೆದಿರುವ ಮೊಹಲ್ಲಾ ಆಸ್ಪತ್ರೆಗನ್ನು ಸ್ಥಾಪಿಸುವ ಯೋಜನೆಯನ್ನು ಕೇಜ್ರಿವಾಲ್ ಕಳೆದ ವರ್ಷ ಪ್ರಕಟಿಸಿದ್ದರು.
ಜೈನ್ ನೇಮಕ ಈಗ ಟೀಕಾಕಾರರಿಗೆ ಗ್ರಾಸವಾಗಿದೆ. ಇದು ಆರೋಗ್ಯ ಸಚಿವರ ಅನಾರೋಗ್ಯಕರ ಹೆಜ್ಜೆ ಎಂಬ ಟೀಕೆಗಳು ಸರ್ವತ್ರ ಕೇಳಿಬರುತ್ತಿವೆ.
ಇದು ಕೇಜ್ರಿವಾಲ್‌ರ ನಿಜವಾದ ಮುಖವನ್ನು ಅನಾವರಣಗೊಳಿಸಿದೆ. ಆಪ್ ಕಾರ್ಯಕರ್ತರಿಗೆ ಸರಕಾರದಲ್ಲಿ ಉನ್ನತ ಹುದ್ದೆಗಳನ್ನು ದಯಪಾಲಿಸಿರುವುದು ಇದೇ ಮೊದಲೇನಲ್ಲ ಎಂದು ಬಿಜೆಪಿಯ ಹರೀಶ ಖುರಾನಾ ಹೇಳಿದ್ದಾರೆ.
ಇದು ಅಕ್ರಮವಾಗಿದೆ ಮತ್ತು ಕೌಟುಂಬಿಕ ನಂಟುಗಳ ಬಗ್ಗೆ ಇತರರನ್ನು ಗುರಿಯಾಗಿಸಿಕೊಂಡು ಕುಟುಕುತ್ತಿರುವ ಪಕ್ಷದ ಇಬ್ಬಗೆ ನಿಲುವಿಗೆ ಸ್ಪಷ್ಟ ನಿದರ್ಶನವಾಗಿದೆ ಎಂದು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಟೀಕಿಸಿದ್ದಾರೆ.
ಆದರೆ ಮಗಳನ್ನು ಸಮರ್ಥಿಸಿಕೊಂಡಿರುವ ಜೈನ್,ಸೌಮ್ಯಾಗೆ ಭವ್ಯ ಭವಿಷ್ಯವಿದ್ದರೂ ಆಕೆ ಅದನ್ನೆಲ್ಲ ತೊರೆದು ದಿಲ್ಲಿ ಜನತೆಯ ಸೇವೆಗೆ ಮುಂದಾಗಿದ್ದಾಳೆ. ಆಕೆಗೆ ಸರಕಾರವು ವಾಹನ,ಬಂಗಲೆ ಅಥವ ಹಣವನ್ನು ನೀಡುತ್ತಿಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News