×
Ad

ಅಫ್ಘಾನ್: ಕನಿಷ್ಠ 62 ಭಯೋತ್ಪಾದಕರ ಹತ್ಯೆ

Update: 2016-07-16 00:12 IST

ಕಾಬೂಲ್, ಜು. 15: ಅಫ್ಘಾನಿಸ್ತಾನದಲ್ಲಿ ಭದ್ರತಾ ಪಡೆಗಳು ಒಂದೇ ದಿನದಲ್ಲಿ ಕನಿಷ್ಠ 62 ಭಯೋತ್ಪಾದಕರನ್ನು ಕೊಂದಿವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.

‘‘ನಂಗರ್‌ಹಾರ್, ಪಕ್ಟಿಕ, ವಾರ್ದಕ್, ಘಝ್ನಿ, ಕಂದಹಾರ್, ಫರಾಹ್, ಬಡಾಖ್‌ಶನ್, ಟಖರ್ ಮತ್ತು ಹೆಲ್ಮಂಡ್ ಪ್ರಾಂತಗಳಲ್ಲಿ ಅಫ್ಘಾನ್ ರಾಷ್ಟ್ರೀಯ ಭದ್ರತಾ ಪಡೆಗಳು ಸೇನಾ ಕಾರ್ಯಾಚರಣೆಗಳನ್ನು ನಡೆಸಿದವು. ಕಾರ್ಯಾಚರಣೆಗಳ ವೇಳೆ 62 ಭಯೋತ್ಪಾದಕರು ಹತರಾದರು ಹಾಗೂ 28 ಮಂದಿ ಗಾಯಗೊಂಡರು. ಇಬ್ಬರನ್ನು ಬಂಧಿಸಲಾಗಿದೆ’’ ಎಂದು ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ಕ್ಸಿನುವ ವಾರ್ತಾಸಂಸ್ಥೆ ವರದಿ ಮಾಡಿದೆ.

ಕಾರ್ಯಾಚರಣೆಯಲ್ಲಿ ಏಳು ಸೈನಿಕರೂ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News