×
Ad

ಬಿಜೆಪಿ ಸರಕಾರ ಇರುವಲ್ಲಿ ಮುಸ್ಲಿಮರು, ದಲಿತರಿಗೆ ಕಿರುಕುಳ: ಮಾಯಾವತಿ

Update: 2016-07-16 15:19 IST

  ಲಕ್ನೊ,ಜುಲೈ 16: ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಮೇಲೆ ದಲಿತರು,ಹಿಂದುಳಿದ ವರ್ಗ,ಧಾರ್ಮಿಕ ಅಲ್ಪಸಂಖ್ಯಾತರು ವಿಶೇಷವಾಗಿ ಮುಸ್ಲಿಮ್ ಸಮುದಾಯದೊಂದಿಗೆ ಭೇದಭಾವ,ಶೋಷಣೆ ಮತ್ತುಕಿರುಕುಳ ನೀಡಲಾಗುತ್ತಿದೆ ಮತ್ತು ನಿಧಾನವಾಗಿ ಈ ಸ್ಥಿತಿ ಭಯಭೀತ ರೂಪಕ್ಕೆ ಹೊರಳುತ್ತಿದೆ ಎಂದು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆಂದು ವರದಿಯಾಗಿದೆ. ಇತ್ತೀಚೆಗೆ ಗುಜರಾತ್‌ನ ಉನಾ ಜಿಲ್ಲೆಯಲ್ಲಿ ಗೋರಕ್ಷೆಯ ಹೆಸರಿನಲ್ಲಿ ಸತ್ತದನದ ಚರ್ಮವನ್ನು ಸುಲಿದ ಆರೋಪದಲ್ಲಿ ದಲಿತ ಸಮಾಜದ ಜನರನ್ನು ಮೂಲಭೂತವಾದಿಗಳು ಬರ್ಬರವಾಗಿ ಹೊಡೆದ ಘಟನೆಯ ಕುರಿತು ಅವರು ಪ್ರತಿಕ್ರಿಯಿಸುತ್ತಿದ್ದರು ಎಂದು ವರದಿ ತಿಳಿಸಿದೆ.

   ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಆರೆಸ್ಸೆಸ್‌ಗೆ ಸೇರಿದ ಮೂಲಭೂತವಾದಿ ಸಂಘಟನೆಯ ಜನರು ತಮ್ಮನ್ನು ಸಂವಿಧಾನಕ್ಕಿಂತ ದೊಡ್ಡವರೆಂದು ತಿಳಿದು ಕೆಲಸಮಾಡುತ್ತಿದ್ದಾರೆ. ಆದ್ದರಿಂದಲೇ ವಿಶೇಷವಾಗಿ ಬಿಜೆಪಿ ಸರಕಾರ ಇರುವ ರಾಜ್ಯಗಳಲ್ಲಿ ಕಾನೂನನ್ನು ಬಹಿರಂಗವಾಗಿ ಕೈಗೆತ್ತಿಕೊಂಡು ಉನ್ಮಾದ ಮತ್ತು ಉಪಟಳದ ಭಯಾನಕ ವಾತಾವರಣವನ್ನು ನಿರಂತರ ಹುಟ್ಟುಹಾಕುತ್ತಿದ್ದಾರೆ ಎಂದು ಮಾಯವತಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

 ಇಷ್ಟೇ ಅಲ್ಲ, ಬಿಜೆಪಿ ಆಳ್ವಿಕೆಯಿರುವ ಮಧ್ಯಪ್ರದೇಶದಲ್ಲಿ ದಲಿತರು ಮತ್ತುಆದಿವಾಸಿ ಸಮಾಜದ ಜನರೊಡನೆ ಸರಕಾರ ಭೇದಭಾವ, ನಿರ್ಲಕ್ಷ್ಯ ಹಾಗೂ ಅವರ ಹಿತಮತ್ತು ಕಲ್ಯಾಣಗಳನ್ನು ಘೋರವಾಗಿ ನಿರ್ಲಕ್ಷಿಸುತ್ತಿರುವ ವಿಚಾರ ಬಹಿರಂಗವಾಗಿದೆ. ಈಕುರಿತು ಅಲ್ಲಿನ ಒಬ್ಬ ಐಎಎಸ್ ಅಧಿಕಾರಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್‌ರ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗ ಅವರಿಗೆ ಹೈದರಾಬಾದ್‌ನ ಪಿಎಚ್‌ಡಿ ವಿದ್ಯಾರ್ಥಿ ವೇಮುಲಾರಿಗೆ ಕೊಟ್ಟಂತೆ ಕಿರುಕುಳ ಕೊಡುವ ಸಿದ್ಧತೆ ನಡೆಯುತ್ತಿದೆ ಎಂದು ಮಾಯಾವತಿ ಹೇಳಿರುವುದಾಗಿ ವೆಬ್ ಪೋರ್ಟಲೊಂದು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News