×
Ad

ಅಜ್ಞಾತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲು

Update: 2016-07-16 23:07 IST

ಸಂಭಾಲ್, ಜು.16: ಸಾಮಾಜಿಕ ಜಾಲತಾಣವೊಂದರಲ್ಲಿ ಎಸ್ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್‌ರ ಆಕ್ಷೇಪಕಾರಿ ಚಿತ್ರವೊಂದನ್ನು ಪೋಸ್ಟ್ ಮಾಡಿರುವ ಸಂಬಂಧ ಅಜ್ಞಾತ ವ್ಯಕ್ತಿಯೊಬ್ಬನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಯೆಂದು ಪೊಲೀಸರಿಂದು ತಿಳಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಯಾವನೋ ಒಬ್ಬ ಎಸ್ಪಿ ವರಿಷ್ಠನ ಆಕ್ಷೇಪಾರ್ಹ ಚಿತ್ರವನ್ನು ಅಪ್‌ಲೋಡ್ ಮಾಡಿರುವ ಬಗ್ಗೆ ಸಮಾಜವಾದಿ ಯುವ ಸಭಾದ ನಗರಾಧ್ಯಕ್ಷ ಖಿಜ್ರಾ ಗೌಸ್ ದೂರು ದಾಖಲಿಸಿದ್ದರೆಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಮಲೇಶ್ ದೀಕ್ಷಿತ್ ಹೇಳಿದ್ದಾರೆ.
ಖಿಜ್ರಾರ ದೂರಿನನ್ವಯ ನಿನ್ನೆ ಅಜ್ಞಾತ ವ್ಯಕ್ತಿಯೊಬ್ಬನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆಯೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News