ಉತ್ತರಾಖಂಡದಲ್ಲಿ ಭಾರೀ ಮಳೆ: 9 ಮಂದಿ ಬಲಿ
Update: 2016-07-17 10:42 IST
ಡೆಹ್ರಾಡೂನ್, ಜು.17: ಹಿಮಾಲಯ ತಪ್ಪಲಿನಲ್ಲ್ಲಿರುವ ರಾಜ್ಯ ಉತ್ತರಾಖಂಡದಲ್ಲಿ ಸತತ ಎರಡನೆ ದಿನವೂ ಭಾರೀ ಮಳೆ ಸುರಿಯುತ್ತಿದ್ದು, ಅತಿವೃಷ್ಟಿಗೆ ಕನಿಷ್ಠ 9 ಮಂದಿ ಸಾವನ್ನಪ್ಪಿದ್ದಾರೆ.
ಭೂಕುಸಿತಕ್ಕೆ ಮೂವರು ಸಾವನ್ನಪ್ಪಿದ್ದರೆ, ಕಾರೊಂದು ಕಣಿವೆಗೆ ಬಿದ್ದ ಪರಿಣಾಮ ಇತರ ಆರು ಮಂದಿ ಅಸುನೀಗಿದ್ದಾರೆ.
ವಿಪರೀತ ಮಳೆಯಿಂದಾಗಿ ಬದ್ರಿನಾಥ್‌ಗೆ ತೆರಳುತ್ತಿರುವ ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿಮಾಲಯದ ಈ ದೇವಾಲಯಕ್ಕೆ ತೆರಳುವ ಹೆದ್ದಾರಿಯಲ್ಲಿ ಬಂಡೆಗಳು ಉರುಳಿ ಬಿದ್ದಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.
ರಾಜ್ಯದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಅಪಾಯಮಟ್ಟಕ್ಕೆ ತಲುಪಿವೆ. ಹರಿದ್ವಾರದಲ್ಲಿರುವ ಗಂಗಾ ನದಿ ಶಾರದಾ, ರಾಮಗಂಗಾ, ನಂದೌರ್, ಗೌಲಾ, ಕೋಶಿ, ಸರವು ನದಿಗಳು ಅಪಾಯಕಾರಿ ಮಟ್ಟವನ್ನು ಮೀರಿ ಹರಿಯುತ್ತಿವೆ. ಹವಾಮಾನ ಇಲಾಖೆಯ ಪ್ರಕಾರ ಮುಂದಿನ ಎರಡು ದಿನಗಳ ಕಾಲ ಉತ್ತರಾಖಂಡದಲ್ಲಿ ಭಾರೀ ಮಳೆ ಮುಂದುವರಿಯಲಿದೆ.