×
Ad

ಬಿಡುಗಡೆಯ ಮೊದಲೇ ದಾಖಲೆಗಳನ್ನು ಚೆಂಡಾಡಿದ ಬಾಹುಬಲಿ-2

Update: 2016-07-17 15:42 IST

ಎಸ್‌ಎಸ್ ರಾಜಮೌಳಿಯ ಬಾಹುಬಲಿ-2: ದ ಕನ್‌ಕ್ಲೂಷನ್ ಸಿನಿಮಾ ಇನ್ನೂ ಚಿತ್ರೀಕರಣ ಪೂರ್ಣಗೊಂಡಿಲ್ಲ. ಆದರೆ ನಿರ್ಮಾಪಕ ಕೆ ರಾಘವೇಂದ್ರ ರಾವ್, ಶೋಬು ಯಾರ್ಲಾಗಡ್ಡ ಮತ್ತು ಪ್ರಸಾದ್ ದೇವಿನೆನಿ ಈಗಲೆೀ ಸಿನಿಮಾದಿಂದ ಹಣ ಗಳಿಸುತ್ತಿದ್ದಾರೆ.

ಈ ಸಿನಿಮಾದ ತಮಿಳು ಭಾಷಾ ಟೀವಿ ಪ್ರದರ್ಶನದ ಹಕ್ಕುಗಳಿಗೆ ಅತಿಯಾದ ಬೇಡಿಕೆ ಇದೆ ಎಂದು ಈ ಹಿಂದೆ ವರದಿಗಳಿದ್ದವು. ಈಗಿನ ಸುದ್ದಿಯ ಪ್ರಕಾರ ಬಾಹುಬಲಿ-2 ಸಿನಿಮಾದ ಟೀವಿ ಹಕ್ಕುಗಳು ತಮಿಳಿನಲ್ಲಿ ದಾಖಲೆ ಬೆಲೆಗೆ ಮಾರಾಟವಾಗಿದೆ. 2015ರಲ್ಲಿ ಬಾಹುಬಲಿ ಮೊದಲಭಾಗದ ಟೀವಿ ಹಕ್ಕುಗಳು ರೂ. 54 ಕೋಟಿಗೆ ಮಾರಾಟವಾಗಿತ್ತು. ಈ ಬಾರಿಯ ವ್ಯವಹಾರದ ನಂತರ ಅತ್ಯಧಿಕ ಸ್ಯಾಟಲೈಟ್ ಬೆಲೆ ಪಡೆದ ಸಿನಿಮಾ ಎನ್ನುವ ಹೆಗ್ಗಳಿಕೆಯೂ ಬಾಹುಬಲಿಗೆ ಸಿಕ್ಕಿದೆ. ಸಿನಿಮಾ 2017 ಎಪ್ರಿಲಲ್ಲಿ ಬಿಡುಗಡೆಯಾಗಲಿದೆ.

ಈ ನಡುವೆ ನಿರ್ದೇಶಕ ರಾಜಮೌಳಿ ಈಗ ಹೈದರಾಬಾದಿನಲ್ಲಿ ಸಿನಿಮಾದ ಕ್ಲೈಮಾಕ್ಸ್ ಚಿತ್ರೀಕರಣ ನಡೆಸುತ್ತಿದ್ದಾರೆ. ಎರಡನೇ ಭಾಗದಲ್ಲಿ ಪ್ರಭಾಸ್, ರಾಣಾ ದಗ್ಗುಬಟ್ಟಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯ, ರಮ್ಯಾ ಕೃಷ್ಣ ಮತ್ತು ಸತ್ಯರಾಜ್ ಮೊದಲಾದ ತಾರಾಗಣವಿದೆ.

ಕೃಪೆ: www.catchnews.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News