ಇಂಟರ್ನೆಟ್ ನಲ್ಲಿ ಸೋರಿಕೆಯಾಯಿತೇ ರಜನಿಯ ಕಬಾಲಿ ?

Update: 2016-07-18 13:52 GMT

ಹೊಸದಿಲ್ಲಿ , ಜು. 18 : ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ , ಬಿಗ್ ಬಜೆಟ್ ಚಿತ್ರ ಕಬಾಲಿ, ಚಿತ್ರ ಮಂದಿರಗಳಲ್ಲಿ ಅಧಿಕೃತ ಬಿಡುಗಡೆಗೆ ಮೊದಲೇ ಇಂಟರ್ನೆಟ್ ನಲ್ಲಿ ಸೋರಿಕೆಯಾಗಿದೆಯೇ ? ಮೂಲಗಳ ಪ್ರಕಾರ ಹೌದು !

ಆದರೆ ಚಿತ್ರತಂಡ ಈ ವಿಷಯವನ್ನು ಚಿತ್ರ ತಂಡ ಸಾಧ್ಯವಾದಷ್ಟು ಮುಚ್ಚಿಟ್ಟು ಮತ್ತಷ್ಟು ಸೋರಿಕೆ ಆಗದಂತೆ ಪ್ರಯತ್ನಿಸುತ್ತಿದೆ. " ನಾವು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಈ  ಅನಧಿಕೃತ ಸೋರಿಕೆಯನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದೇವೆ. ಹಾಗೆಯೇ ಸೋರಿಕೆ ಕಾಪಿಯನ್ನು ವೀಕ್ಷಿಸದಂತೆ ನಾವು ರಜನಿ ಅಭಿಮಾನಿಗಳಲ್ಲಿ ವಿನಂತಿಸುತ್ತೇವೆ " ಎಂದು ಚಿತ್ರತಂಡದ ಮೂಲ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News