ತಿರಸ್ಕರಿಸಿದ ಕೇಂದ್ರ
Update: 2016-07-19 23:15 IST
ಹೊಸದಿಲ್ಲಿ, ಜು.19: ಆಂಧ್ರಪ್ರದೇಶದ ಪ್ರಸಿದ್ಧ ಯಾತ್ರಾಸ್ಥಳ ತಿರುಪತಿ ಬೆಟ್ಟಗಳನ್ನು ವಿಮಾನ ಹಾರಾಟ ನಿಷೇಧಿತ ವಲಯವಾಗಿ ಘೋಷಿಸುವ ಸಾಧ್ಯತೆಯಿಲ್ಲವೆಂದು ನಾಗರಿಕ ವಾಯುಯಾನ ಸಚಿವಾಲಯ ಮಂಗಳವಾರ ಸ್ಪಷ್ಟಪಡಿಸಿದೆ.
ಶ್ರೀವೆಂಕಟೇಶ್ವರ ದೇವಾಲಯವಿರುವ ತಿರುಪತಿ ಬೆಟ್ಟ ಪ್ರದೇಶವನ್ನು ಹಾರಾಟ ನಿಷೇಧ ವಲಯವಾಗಿ ಘೋಷಿಸಬೇಕೆಂದು ಕೋರಿ ಆಂಧ್ರಪ್ರದೇಶ ಸರಕಾರವು ಮನವಿ ಸಲ್ಲಿಸಿದೆಯೆಂದು ನಾಗರಿಕ ವಾಯುಯಾನ ಸಚಿವ ಜಯಂತ್ ಸಿನ್ಹಾ ಮಂಗಳವಾರ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರವೊಂದರಲ್ಲಿ ತಿಳಿಸಿದ್ದಾರೆ.
‘‘ಭೌಗೋಳಿಕ ಇತಿಮಿತಿಗಳಿಂದಾಗಿ ತಿರುಪತಿ ವಿಮಾನ ನಿಲ್ದಾಣದಲ್ಲಿ ಒಂದು ರನ್‌ವೇ ಮಾತ್ರವೇ ಕಾರ್ಯನಿರ್ವಹಿಸುತ್ತಿದೆ. ಒಂದು ವೇಳೆ ತಿರುಮಲ ಬೆಟ್ಟ ಗಳನ್ನು ಹಾರಾಟ ನಿಷೇಧಿತ ವಲಯವಾಗಿ ಘೋಷಿಸಿದಲ್ಲಿ, ಈ ಪ್ರಮುಖ ವಿಮಾನ ನಿಲ್ದಾಣದ ಬಳಕೆಯು ಇನ್ನೂ ಕಡಿಮೆಯಾಗಲಿದೆ’’ ಎಂದು ಸಿನ್ಹಾ ಸದನಕ್ಕೆ ತಿಳಿಸಿದ್ದಾರೆ.